ಲಾರಿ ಹರಿದು 9 ಕುರಿಗಳು ಸಾವು, 11 ಕುರಿಗಳಿಗೆ ಗಂಭೀರ ಗಾಯ
ಲಾರಿ ಹರಿದು 9 ಕುರಿಗಳು ಧಾರುಣ ಅಂತ್ಯಗೊಂಡ ಘಟನೆ ಸಮೀಪದ ಹೈದರಾಬಾದ್ ಮುಖ್ಯ ರಸ್ತೆಯ ಯರಮರಸ್ ಬೈಪಾಸ್ ಬಳಿ ಜ.10ರ ಬುಧವಾರ ಬೆಳಗ್ಗೆ ನಡೆದಿದೆ.
11 ಕುರಿಗಳು ಗಂಭೀರ ಗಾಯಗೊಂಡಿವೆ. ಬೈಕ್ ಲಾರಿಯಡಿ ಸಿಲುಕಿದ್ದು, ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲಾರಿ ಮತ್ತು ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




