ಕಾಸರಗೋಡು: ಎದೆ ಹಾಲು ಗಂಟಲಲ್ಲಿ ಸಿಲುಕಿ ಮಗು ಮೃತ್ಯು
ಕಾಸರಗೋಡು: ಜಿಲ್ಲೆಯ ಗಡಿಭಾಗವಾದ ಕುಂಬಳೆ ಸಮೀಪ ಬಂಬ್ರಾಣ ಎಂಬಲ್ಲಿ ಮಂಗಳವಾರ ತಾಯಿಯ ಎದೆಹಾಲು ಕುಡಿಯುವ ವೇಳೆ ಹಾಲು ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ಅಬ್ದುಲ್ ಅಝೀಝ್ – ಖದೀಜಾ ದಂಪತಿ ಪುತ್ರಿ ಎರಡೂವರೆ ತಿಂಗಳ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮಲಗಿ ಎದೆಹಾಲು ಕುಡಿಯುತ್ತಿದ್ದ ಮಗು ಎಷ್ಟು ಹೊತ್ತಾದರೂ ಎಚ್ವರಗೊಳ್ಳದೆ ಇದ್ದಾಗ ಮನೆಯವರು ಗಾಬರಿಯಾಗಿ ವೈದ್ಯರ ಬಳಿ ಹೋಗಿದ್ದಾರೆ. ಈ ಸಂದರ್ಭ ಗಂಟಲಲ್ಲಿ ಹಾಲು ಸಿಕ್ಕಿ ಅಸು ನೀಗಿರುವುದು ಗೊತ್ತಾಗಿದೆ. ಕುಂಬಳೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.




