February 4, 2026

ಸುಳ್ಯ: ಚಿರತೆ ದಾಳಿಗೆ ತೋಟದಲ್ಲಿದ್ದ ಕರು ಸಾವು

0
image_editor_output_image382493088-1704780746935.jpg

ಸುಳ್ಯ: ತೋಟಕ್ಕೆ ಮೇಯಲು ಹೋಗಿದ್ದ ಕರುವನ್ನು ಚಿರತೆ ಅರ್ಧ ತಿಂದು ಬಿಟ್ಟು ಹೋದ ಘಟನೆ ಸುಳ್ಯದ ಅರಂತೋಡು ಗ್ರಾಮದಿಂದ ವರದಿಯಾಗಿದೆ.

ಅರಂತೋಡು ಗ್ರಾಮದ ಅಡ್ಕಬಳೆಯ ಲೀಲಾವತಿ ಎಂಬವರ ಕರುವನ್ನು ಮೇಯಲು ಬಿಟ್ಟಿದ್ದು, ಸಂಜೆಯಾದರೂ, ಕರು ಬರದೇ ಇದ್ದ ಕಾರಣ ಮನೆಯವರು ತೋಟಕ್ಕೆ ಹೋಗಿ ನೋಡಿದ ವೇಳೆ ಕರುವಿನ ಮೃತದೇಹ ಅರ್ಧ ತಿಂದ ರೀತಿಯಲ್ಲಿ ಪತ್ತೆಯಾಗಿದೆ.

ಕಳೆದ ಎರಡು ದಿನಗಳ ಹಿಂದೆ ಇದೇ ಮನೆಯಲ್ಲಿ ಸಾಕುತ್ತಿದ್ದ ಮೂರು ಆಡುಗಳನ್ನು ರಾತ್ರಿ ಸಮಯದಲ್ಲಿ ಚಿರತೆ ಕೊಂದು ಹಾಕಿತ್ತು. ಚಿರತೆ ಹಾವಳಿಯಿಂದ, ಸಾರ್ವಜನಿಕರು ಭಯಬೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!