February 4, 2026

ಕುಕ್ಕೆ ಸುಬ್ರಹ್ಮಣ್ಯ: ಚಲಿಸುತ್ತಿದ್ದ ವಾಹನದ ಮೇಲೆ ಬೃಹತ್ ಗಾತ್ರದ ಮರ: ಹಲವರಿಗೆ ಗಾಯ

0
image_editor_output_image-2017497727-1704780513133.jpg

ಕುಕ್ಕೆ ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಚಲಿಸುತ್ತಿರುವ ಟಾಟಾ ಸುಮೋ ಮತ್ತು ಸ್ಥಳೀಯ ಅಂಗಡಿಯೊಂದರ ಮೇಲೆ ಬಿದ್ದ ಪರಿಣಾಮ ಹಲವರು ಗಾಯಗೊಂಡಿದೆ.

ಬಾರೀ ದೊಡ್ಡ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಪ್ರವಾಸಿಗರನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಟ್ಟು ವಾಪಸಾಗುತ್ತಿದ್ದ ಟಾಟಾ ಸುಮೋ ವಾಹನದ ಮೇಲೆ ಈ ಮರ ಬಿದ್ದಿದೆ. ವಾಹನದಲ್ಲಿದ್ದ ಮೂಜೂರು ನಿವಾಸಿ ಶೇಖರ ಎಂಬವರು ಗಂಭೀರ ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!