February 4, 2026

ಟ್ರಕ್‌, ಕಾರು ನಡುವೆ ಅಪಘಾತ: ಇಬ್ಬರು ಪೊಲೀಸರು ಮೃತ್ಯು

0
image_editor_output_image21318648-1704779767597.jpg

ಟ್ರಕ್‌ ಹಾಗೂ ಕಾರು ಢಿಕ್ಕಿಯಾದ ಪರಿಣಾಮ ಇಬ್ಬರು ಪೊಲೀಸರು ಮೃತಪಟ್ಟಿರುವ ಘಟನೆ ಸೋಮವಾರ(ಜ.8) ತಡರಾತ್ರಿ ಸೋನಿಪತ್‌ನ ಕುಂಡಲಿ ಗಡಿಯ ಬಳಿ ನಡೆದಿದೆ.

ವಾಯವ್ಯ ಜಿಲ್ಲಾ ವಿಶೇಷ ಸಿಬ್ಬಂದಿಯಲ್ಲಿ ನಿಯೋಜನೆಗೊಂಡಿದ್ದ ಇನ್ಸ್‌ಪೆಕ್ಟರ್ ದಿನೇಶ್ ಬೇನಿವಾಲ್ ಮತ್ತು ಆದರ್ಶ್ ನಗರ ಪೊಲೀಸ್ ಠಾಣೆಯಲ್ಲಿ ಎಟಿಒ ಇನ್ಸ್‌ಪೆಕ್ಟರ್ ರಣವೀರ್ ಮೃತ ಪೊಲೀಸ್‌ ಸಿಬ್ಬಂದಿಗಳು.

ದಿನೇಶ್ ಬೇನಿವಾಲ್ ಹಾಗೂ ರಣವೀರ್ ರಾತ್ರಿ 11 ಗಂಟೆಯ ಸುಮಾರಿಗೆ ತಮ್ಮ‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ಟ್ರಕ್‌ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿ ಸಿಲುಕಿಕೊಂಡು ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದ ಪರಿಣಾಮ ಕಾರು ಸಂಪೂರ್ಣ ನಜ್ಜುನುಜ್ಜಾಗಿದೆ.

Leave a Reply

Your email address will not be published. Required fields are marked *

error: Content is protected !!