ಹಿದಾಯ ಯೂತ್ ವಿಂಗ್ ಅಧ್ಯಕ್ಷರಾಗಿ ಖಲೀಲ್ ಕಲ್ಲಡ್ಕ ಆಯ್ಕೆ
ಮಂಗಳೂರಿನ ಪ್ರತಿಷ್ಟಿತ ಸಾಮಾಜಿಕ ಸೇವಾ ಸಂಸ್ಥೆಯಾಗಿರುವ ಹಿದಾಯ ಫೌಂಡೇಶನ್ ಮಂಗಳೂರು ಇದರ ಯೂತ್ ವಿಂಗ್ ಸಭೆ ಮಂಗಳೂರಿನ ಕಚೇರಿಯಲ್ಲಿ ನಡೆಯಿತು
ಇದರ ಅಂಗವಾಗಿ ನಡೆದ ಕಿರು ಕಾರ್ಯಾಗಾರದಲ್ಲಿ, ಸಾಮಾಜಿಕ ತಂಡಗಳು ಅತುತ್ತಮ ಮಟ್ಟದ ಪಲಿತಾಂಶ ಹೇಗೆ ಪಡೆಯಬಹುದು ಎಂಬ 4 ವಿಭಾಗ & 8 ಧ್ಯೇಯವನ್ನು ವಿವರವಾದ ವಿಶ್ಲೇಷಣೆ ಮೂಲಕ ಮನದಟ್ಟು ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಖಲೀಲ್ ಕಲ್ಲಡ್ಕ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಆಶಿಕ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಕೆ
ಎಸ್. ಫರ್ವೇಝ್, ಖಜಾಂಜಿಯಾಗಿ ಝಾನಿಕ್, ಸ್ಕಿಲ್ ಡೆವೆಲಪರ್ ಆಗಿ ಹರ್ಫಾಝ್, ಮಾದ್ಯಮ ಸಂಯೋಜಕರಾಗಿ ಶಾಹಿಲ್, ವಿಸ್ತರಣಾಕಾರಿಯಾಗಿ ಇಮ್ತಿಯಾಝ್, ಸಂಶೋಧನೆ ಮತ್ತು ಅಭಿವರ್ಧಕರಾಗಿ ರಿಫಾತ್, ಅಲ್ತಾಫ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಹಿದಾಯ ಫಂಡೇಶನ್ ನ ಕಾಸಿಂ ಅಹ್ಮದ್ ಅವರು ಪ್ರೇರಣಾ ಭಾಷಣ ಮಾಡಿದರು. ಝಿಯಾವುದ್ದೀನ್, ಇಫ್ತಿಕಾರ್, ಇಮ್ತಿಯಾಝ್ ಹಜ್ಜಾಜ್ ಮತ್ತಿತರರು ಉಪಸ್ಥಿತರಿದ್ದರು.





