ವಿಟ್ಲ: ಜೇಸಿಐ ವತಿಯಿಂದ ಜ.8ರಂದು ವಿನೂತನ ಕಾರ್ಯಕ್ರಮ: ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಮತ್ತು ಪರೀಕ್ಷಾ ಸಿದ್ಧತೆಯಲ್ಲಿ ಶಿಕ್ಷಕರ ಪಾತ್ರ ಕಾರ್ಯಕ್ರಮ
ವಿಟ್ಲ: ಜೇಸಿಐ ವಿಟ್ಲ ವತಿಯಿಂದ ವಿನೂತನ ಕಾರ್ಯಕ್ರಮವು ಜ. 8ರಂದು ಬೆಳಿಗ್ಗೆ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಈ ತರಬೇತಿ ಕಾರ್ಯಕ್ರಮದಲ್ಲಿ ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಮತ್ತು ಪರೀಕ್ಷಾ ಸಿದ್ಧತೆಯಲ್ಲಿ ಶಿಕ್ಷಕರ ಪಾತ್ರ ಕಾರ್ಯಕ್ರಮವು ನಡೆಯಲಿದೆ. ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಕಾರ್ಯಕ್ರಮವನ್ನು ವಲಯ 15 ವಲಯಾಧ್ಯಕ್ಷರು Jc Adv. ಗಿರೀಶ್ ಎಸ್.ಪಿ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಸಂತೋಷ್ ಶೆಟ್ಟಿ ಪೆಲತಡ್ಕ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ’ಪರಿವರ್ತನಾ’ ವಿದ್ಯಾಸಂಸ್ಥೆ, ಶ್ರೀರಂಗಪಟ್ಟಣ ಅಂತರಾಷ್ಟ್ರೀಯ ತರಬೇತುದಾರರಾದ ಚೇತನ್‌ರಾಮ್ ಎ.ಆರ್. ಭಾಗವಹಿಸಲಿದ್ದಾರೆ. ವಿಟ್ಲ ವಿಠಲ ಪದವಿ ಪೂರ್ವ ಕಾಲೆಜಿನ ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.






