ಗಿಫ್ಟ್, ಜ್ಯೂಸ್ ಸೆಂಟರ್ ನಲ್ಲಿ ಬೆಂಕಿ ಅವಘಡ: ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಭಸ್ಮ

ತೀರ್ಥಹಳ್ಳಿ: ಪಟ್ಟಣದ ಗಾಂಧಿ ಚೌಕದ ಕಲ್ಲಾರೆ ಗಣಪತಿ ದೇವಸ್ಥಾನದ ಸಮೀಪದ ಹರೇ ರಾಮ ಹರೇ ಕೃಷ್ಣ ಗಿಫ್ಟ್ – ಜ್ಯೂಸ್ ಸೆಂಟರ್ ನಲ್ಲಿ ರಾತ್ರಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು 3 ರಿಂದ 4 ಲಕ್ಷಕ್ಕೂ ಅಧಿಕ ಮೊತ್ತದ ಐಟಂ ಗಳು ಹಾನಿಯಾಗಿವೆ.
ರಾತ್ರಿ ಅಂಗಡಿ ಬಾಗಿಲು ಹಾಕಿ ಹೋದ ನಂತರದಲ್ಲಿ ಶಾರ್ಟ್ ಸರ್ಕ್ಯುಟ್ ಆಗಿದ್ದು ಪಕ್ಕದಲ್ಲಿ ಇದ್ದ ಅಂಗಡಿಯವರು ಹೊಗೆ ಬರುವುದನ್ನು ಗಮನಿಸಿ ಮಾಲೀಕರಿಗೆ ತಿಳಿಸಿದ್ದಾರೆ. ನಂತರ ಅಕ್ಕ ಪಕ್ಕದ ಸ್ಥಳೀಯರು ಹಾಗೂ ಅಗ್ನಿಶಾಮಾಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.