December 16, 2025

ಬಂಟ್ವಾಳ: ಎರಡು ತಂಡಗಳ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0
image_editor_output_image-1004884273-1703225941765.jpg

ಬಂಟ್ವಾಳ: ಯೋಜನೆಯೊಂದರ ಕುರಿತಾಗಿ ಮಾಹಿತಿ ನೀಡುತ್ತಿದ್ದ ವೇಳೆ ಮನೆಯೊಳಗೆ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದಕ್ಕೆ ಪ್ರತಿಯಾಗಿ ಯೋಜನೆಯ ಸಭೆ ನಡೆಯುತ್ತಿದ್ದ ವೇಳೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರು ‌ನೀಡಿದ್ದು, ಇದೀಗ ಎರಡು ತಂಡಗಳ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಳ್ಳಾಲ ಗ್ರಾಮದ ರವೀಂದ್ರ ಶೆಟ್ಟಿ ನೀಡಿದ ದೂರಿನಂತೆ ಸಾನೂರು ನಿವಾಸಿ ಶೈಲಜಾ ಶೆಟ್ಟಿ ಎಂಬವರಿಗೆ ಪ್ರಕರಣದ ಆರೋಪಿತೆಯಾದ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಬೇಂಕ್ಯ ಇಂದಿರಾ ನಗರದ ಬೇಬಿ ಎಂಬವರು ಪೋನ್ ಕರೆ ಮಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುರಿತು ಮಾಹಿತಿ ಕೇಳಿದ ಮೇರೆಗೆ ಮಾಹಿತಿ ನೀಡುವ ಸಲುವಾಗಿ ಡಿ.18 ರಂದು ಮಧ್ಯಾಹ್ನ ಶೈಲಜಾ ಶೆಟ್ಟಿ, ದಿನೇಶ್,ಗಣೇಶ್ ಹಾಗೂ ಇನ್ನೋರ್ವ ಹುಡುಗಿಯೊಂದಿಗೆ ಬೇಬಿ ಅವರ ಮನೆಗೆ ತೆರಳಿದ್ದರು.

ಅ ವೇಳೆ ಮನೆಯಲ್ಲಿ ಸುಮಾರು 25 ಜನ ಹೆಂಗಸರು, ಹಾಗೂ 3 ಮಂದಿ ಗಂಡಸರು ಇದ್ದು, ಶೈಲಜಾ ಶೆಟ್ಟಿ ಹಾಗೂ ರವೀಂದ್ರ ಶೆಟ್ಟಿ ಅವರು ಯೋಜನೆಯ ಕುರಿತು ಮಾಹಿತಿ ನೀಡುತ್ತಿದ್ದ ವೇಳೆ ಅಲ್ಲಿ ಸೇರಿದ್ದ ಜನರು ನೀವು ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಹೇಳಿ ಬಂದಿದ್ದವರನ್ನು ಮನೆಯೊಳಗೆ ಕೂಡಿ ಹಾಕಿ ಅವ್ಯಾಚ್ಚವಾಗಿ ಬೈದು ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಇವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದಕ್ಕೆ ಪ್ರತಿಯಾಗಿ ಸಜೀಪ ಮುನ್ನೂರು ನಿವಾಸಿ ಬೇಬಿ ಅವರು ದೂರು ನೀಡಿದ್ದು, ಮನೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ‌ ಯೋಜನೆ ಸಭೆ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಆರೋಪಿಗಳಾದ ಕಾರ್ಕಳದ ಸಾಣೂರು ಶೈಲಜಾ ಶೆಟ್ಟಿ, ಮುಡಿಪು ರವೀಂದ್ರ ಶೆಟ್ಟಿ, ಗಣೇಶ್ ಕಂಟಲ್ ಪಾಡಿ, ಕೃಷ್ಣ ಸರಪಾಡಿ, ಯೋಗೀಶ್ ಶೆಟ್ಟಿ ಸಾಣೂರು ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯ ಬಗ್ಗೆ ತಕರಾರು ತೆಗೆದು ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ ಹಾಗೂ ಸಂಘದ ಸದಸ್ಯರಿಗೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!