March 27, 2026

ಮಠಾಧೀಪತಿಗಳ ಕೈಯಲ್ಲಿ ಆಯುಧ ಕೊಡಬೇಕು: ದಿಂಗಾಲೇಶ್ವರ ಸ್ವಾಮೀಜಿಯಿಂದ  ಪ್ರಚೋದನಾಕಾರಿ ಭಾಷಣ

0
image_editor_output_image-971105668-1702880528856.jpg

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಪ್ರಚೋದಾನಾಕಾರಿ ಭಾಷಣವನ್ನು ಮಾಡಿದ್ದಾರೆ.

ನಮ್ಮ ಸಮಾಜದ ನಾಯಕರು, ಮಠಾಧೀಪತಿಗಳ ಕೈಯಲ್ಲಿ ಆಯುಧ ಕೊಡಬೇಕು. ಆಯುಧ ಕೊಟ್ಟು ಮಠ ಮಾನ್ಯಗಳು, ಗಣ್ಯರ ರಕ್ಷಣೆ ಮಾಡಬೇಕು ಎಂದು ಪುರಾಣದ ಮಾತು ಉಲ್ಲೇಖಿಸಿ ಆಯುಧ ಕೊಡಬೇಕು ಎಂದು ಸ್ವಾಮೀಜಿ ಹೇಳಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ದೇವಿ ಕಡೆ ಸ್ವತಂತ್ರ ಆಯುಧ ಇರಲಿಲ್ಲ. ಎಲ್ಲರೂ ಒಂದು ಆಯುಧ ಕೊಟ್ಟಿರುವ ಕಾರಣಕ್ಕೆ ದುಷ್ಟರ ಸಂಹಾರ ಮಾಡಿದಳು. ಇದನ್ನು ಹೇಳೋಕೆ ಕಾರಣ, ನಮ್ಮ ನಾಯಕರುಗಳಿಗೆ ಒಬ್ಬೊಬ್ಬರು ಆಯುಧ ಕೊಡಬೇಕು. ಸಮಾಜದಲ್ಲಿ ಬಲಿಷ್ಠ ಆಗುವ ವ್ಯಕ್ತಿಗಳಿಗೆ ತೊಂದರೆ ಕೊಡುವ ಕೆಲಸ ಈ ನಾಡಿನಲ್ಲಿದೆ. ಮಠಾಧಿಪತಿಗಳಿಗೂ ಇದು ತಪ್ಪಿಲ್ಲ. ಮಠಾಧಿಪತಿಗಳನ್ನು ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!