March 27, 2026

ಬೆಂಕಿ ತಗಲಿ ಬೀದಿ ಬದಿಯಲ್ಲಿದ್ದ ಅಂಗಡಿಗಳು ಭಸ್ಮ

0
image_editor_output_image2055288284-1702880695511.jpg

ಮಂಡ್ಯ: ಬೀದಿ ಬದಿಯಲ್ಲಿದ್ದ ಹಣ್ಣಿನ ಅಂಗಡಿಗಳು ಸೇರಿದಂತೆ ಇತರೆ ಅಂಗಡಿಗಳು ಬೆಂಕಿಯಿಂದ ಸುಟ್ಟು ಕರಕಲಾಗಿರುವ ಘಟನೆ ಮಂಡ್ಯದ ಹೊಳಲು ಸರ್ಕಲ್‌ನಲ್ಲಿ ಜರುಗಿದೆ.

ಇಂದು ಬೆಳಗ್ಗಿನ ಜಾವ 3.30ರ ವೇಳೆಯಲ್ಲಿ ಹೊಳಲು ಸರ್ಕಲ್‌ನಲ್ಲಿ ರಸ್ತೆ ಬದಿಯಲ್ಲಿದ್ದ ಹಣ್ಣಿನ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬಳಿಕ ಪಕ್ಕದಲ್ಲೇ ಇದ್ದ ಮತ್ತೊಂದು ಅಂಗಡಿಗೂ ಈ ಬೆಂಕಿ ವ್ಯಾಪಿಸಿದೆ. ಬೆಂಕಿಯ ತೀವ್ರತೆ ಹೆಚ್ಚಿದ ಕಾರಣ ಎರಡೂ ಅಂಗಡಿಗಳು ಸುಟ್ಟು ಕರಕಲಾಗಿವೆ.

Leave a Reply

Your email address will not be published. Required fields are marked *

error: Content is protected !!