May 9, 2026

ಶಾಲಾ ಕರ್ತವ್ಯ ನಿರ್ವಹಿಸುವ ವೇಳೆ ಕುಸಿದು ಬಿದ್ದು ಶಿಕ್ಷಕ ಮೃತ್ಯು

0
image_editor_output_image1069647628-1702633397847.jpg

ಭರಮಸಾಗರ: ಶಾಲಾ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲೂಕಿನ ವಡ್ಡರಸಿದ್ದವನಹಳ್ಳಿ ಗ್ರಾಮದಲ್ಲಿ ಡಿ.15ರ ಶುಕ್ರವಾರ ನಡೆದಿದೆ.

ಚಿತ್ರದುರ್ಗ ತಾಲೂಕಿನ ಕೊಡಗಹಳ್ಳಿ ಮೂಲದ ಜೆ.ಬಸವರಾಜಪ್ಪ (60) ಮೃತ ಶಿಕ್ಷಕರು.

ಶಿಕ್ಷಕರು ಶಾಲಾ ಕರ್ತವ್ಯ ನಿರ್ವಹಣೆ ವೇಳೆ ಕುಸಿದು ಬಿದ್ದಿದ್ದಾರೆ. ಅವರ ಆರೋಗ್ಯ ಏರುಪೇರು ಗಮನಿಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ ಇಬ್ಬರು ಪುತ್ರರು, ಒರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!