May 9, 2026

ವಿಟ್ಲ: ಶತಮಾನದ ಹಳೆಯ ಮರಕ್ಕೆ ಕೊಡಲಿ: ಪರಿಸರ ಪ್ರೇಮಿಗಳಿಂದ ಆಕ್ರೋಶ

0
image_editor_output_image343819637-1702571879460

ವಿಟ್ಲ-ಕಲ್ಲಡ್ಕ ಮುಖ್ಯ ರಸ್ತೆಯ ವೀರಕಂಬ ಗ್ರಾಮದ ಮಂಗಲಪದವು ಜಂಕ್ಷನಲ್ಲಿದ್ದ ಶತಮಾನ ಕಂಡ ಮರವನ್ನು ಅರಣ್ಯಾಧಿಕಾರಿಗಳು ಕಡಿದು ಹಾಕಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳಪದವು ಜಂಕ್ಷನ್ ನಲ್ಲಿ
ಸಾರ್ವಜನಿಕರಿಗೆ,ನೂರಾರು ಪಕ್ಷಿಗಳಿಗೆ ಆಶ್ರಯ ನೀಡುತ್ತಿದ್ದ ಶತಮಾನಗಳಷ್ಟು ಹಳೆಯ ಮರ ಇದಾಗಿದೆ. ಯಾರೋ ಖಾಸಗಿ ವ್ಯಕ್ತಿಯ ಸ್ವಾರ್ಥದ ಹುಚ್ಚಾಟಕ್ಕೆ ಸ್ಥಳೀಯ ಅರಣ್ಯ ಸಿಬ್ಬಂದಿಯ ಕುಮ್ಮಿಕ್ಕುನಿಂದ  ಖಾಸಗಿಯವರಿಂದ ಗೆಲ್ಲನ್ನು ಕಡಿಯುವ ನೆಪವನ್ನು ಹೇಳಿ ಅಕ್ರಮವಾಗಿ ಮರವನ್ನು ಕಡಿದಿದ್ದಾರೆ, ದಯವಿಟ್ಟು ಇದಕ್ಕೆ ಸಂಬಂದ ಪಟ್ಟವರ ಮೇಲೆ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಮರ ಅಪಾಯವಾಗಿದೆ ಎಂಬ ಕಾರಣ ನೀಡಿ ಮರವನ್ನು ಕಡಿಯಲಾಗಿದೆ. ಮರ ಕಡಿಯುತ್ತಿದ್ದಂತೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಗೆಲ್ಲನ್ನು ಕಡಿದು ಹೋಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!