May 9, 2026

ಲೋಕಸಭೆಯಲ್ಲಿ ಭದ್ರತಾ ಲೋಪ:
ಸಂಸತ್ ಭವನದಲ್ಲಿ ಅಪರಿಚಿತರಿಂದ ಟಿಯರ್ ಗ್ಯಾಸ್ ದಾಳಿ

0
n5649060741702454827926f8aeb67ead2de4108207486ea504ad26a4a30588307af2ee4a297175761cbf63.jpg

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ವ್ಯಕ್ತಿಗಳಿಬ್ಬರು ಜನರು ಕೂರುವ ಗ್ಯಾಲರಿಯಿಂದ ಚೇಂಬರ್‌ಗೆ ಜಿಗಿದಿದ್ದಾರೆ.

ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಜಿಗಿದು ಸದನದ ಸುತ್ತಲೂ ಓಡಲು ಪ್ರಾರಂಭಿಸುತ್ತಿದ್ದಂತೆ ಸಂಸದರು ಲೋಕಸಭೆಯಿಂದ ಹೊರಬಂದಿದ್ದಾರೆ.

ಇಂದು ಸಂಸತ್ ಕಲಾಪ ನಡೆಯುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಒಳನುಗ್ಗಿ ಗ್ಯಾಸ್ ಹೊರಸೂಸುವ ವಸ್ತುವೊಂದನ್ನು ಎಸೆದ ಘಟನೆ ನಡೆದಿದೆ. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು. ಅವರು ಅನಿಲ ಹೊರಸೂಸುವಂಥಾ ಏನೋ ವಸ್ತು ಎಸೆದರು, ಅವರನ್ನು ಸಂಸದರು ಹಿಡಿದರು. ಆಮೇಲೆ, ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದಿದ್ದಾರೆ ಎಂದು ವರದಿಯಾಗಿದೆ.

ಸಭಾಪತಿ ರಾಜೇಂದ್ರ ಅಗರವಾಲ್ ಕೂಡಲೇ ಕಲಾಪವನ್ನು ಮುಂದೂಡಿದರು. ಒಳನುಗ್ಗಿದವರನ್ನು ಇನ್ನೂ ಗುರುತಿಸಬೇಕಿದೆ. ಸಂಸತ್ತಿನ ಅಧಿಕೃತ ಹೇಳಿಕೆಯನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!