March 21, 2026

ಪ್ರತಿಷ್ಠಿತ ಎಕೆಜಿ ಸೊಸೈಟಿ ಅಧ್ಯಕ್ಷರಾಗಿ ಹರಿದಾಸ್ ಎಸ್. ಎಂ, ಉಪಾಧ್ಯಕ್ಷರಾಗಿ ಯಶವಂತ ಮರೋಳಿ ಆಯ್ಕೆ

0
InShot_20211203_133852713.jpg

ಮಂಗಳೂರು: ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ಇದರ ಮುಂದಿನ 5 ವರ್ಷ ಅವಧಿಗೆ ಅಧ್ಯಕ್ಷರಾಗಿ ಹರಿದಾಸ್ ಎಸ್, ಎಂ ಬೆಳ್ತಂಗಡಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಯಶವಂತ ಮರೋಳಿ ಮಂಗಳೂರು ಅವಿರೋಧವಾಗಿ ಆಯ್ಕೆಯಾದರು.

ಮಂಗಳೂರಿನ ಎಲ್ಐಸಿ ಪಾಪ್ಯುಲರ್ ಬಿಲ್ಡಿಂಗ್ ನಲ್ಲಿರುವ ಸಂಘದ ಕೇಂದ್ರ ಕಛೇರಿಯಲ್ಲಿ ಡಿಸೆಂಬರ್ 2 ರಂದು ನಡೆದ ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ವಿಲಾಸ್ ಅವರು ಚುನಾವಣಾಧಿಕಾರಿಯಾಗಿ ಭಾಗವಹಿಸಿ ನಡೆಸಿದರು.

ಹರಿದಾಸ್ ಎಸ್. ಎಂ ಬೆಳ್ತಂಗಡಿ ಅವರು ನ್ಯಾಷನಲ್ ಇನ್ಶುರೆನ್ಸ್‌ ಕಂಪನಿಯ ಅಧಿಕಾರಿಯಾಗಿ ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷರಾಗಿ ಮೀನು, ಜೇನು, ಕೋಳಿ , ಆಡು ಸಾಗಾಣಿಕೆಗೆ ಉತ್ತೇಜನ ನೀಡುತ್ತಿದ್ದಾರೆ. ಹಡಿಲು ಬಿದ್ದ ಜಮೀನಿನಲ್ಲಿ ಸ್ವತಃ ತರಕಾರಿ, ಬತ್ತ ಬೆಳೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಯಶವಂತ ಮರೋಳಿ ಅವರು ನ್ಯಾಯವಾದಿಯಾಗಿ, ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷರಾಗಿ ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಸಂಘದ ನಿರ್ದೇಶಕರುಗಳಾಗಿ ಯುವ ಉದ್ಯಮಿ ವೆಂಕಟೇಶ್ ಮಯ್ಯ ಮಂಗಳೂರು, ಎನ್ಐಸಿ ನಿವೃತ್ತ ಅಧಿಕಾರಿ ಮಾದವ ಸುವರ್ಣ ಮಂಗಳೂರು, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಬೆಳ್ತಂಗಡಿ, ಎನ್ಐಸಿ ನಿವೃತ್ತ ಅಧಿಕಾರಿ ಬಿ. ರವೀಂದ್ರ ಬಂಟ್ವಾಳ, ಶಿಕ್ಷಕಿ ಪರಿಮಳ ಎಂ.ವಿ ಬೆಳ್ತಂಗಡಿ, ನ್ಯಾಯವಾದಿ ಹೆಚ್. ಮನೋಹರ ರಾವ್ ನಿಡ್ಲೆ, ವೈಜಯಂತಿ ಮಂಗಳೂರು, ಅನುಪಮ ಮಂಗಳೂರು, ನ್ಯಾಯವಾದಿ ಸುಕನ್ಯಾ ಹೆಚ್ ಬೆಳ್ತಂಗಡಿ, ಯುವ ಉದ್ಯಮಿ ಶಾಂತರಾಜ್ ಮಂಗಳೂರು, ಶೇಖರ್ ಲಾಯಿಲ, ಪದ್ಮಾವತಿ ಬೆಳ್ತಂಗಡಿ ಅವಿರೋಧವಾಗಿ ಆಯ್ಕೆಯಾದರು.

Leave a Reply

Your email address will not be published. Required fields are marked *

You may have missed

error: Content is protected !!