March 20, 2026

ಸಂಸತ್ತಿನಲ್ಲಿ ನಿಂದನೆಗೊಳಗಾಗಿದ್ದ ಸಂಸದ ದಾನಿಶ್ ಅಲಿಯನ್ನು ಬಿಎಸ್ಪಿ ಪಕ್ಷದಿಂದ ಉಚ್ಚಾಟಿಸಿದ ಮಾಯಾವತಿ

0
105864298.png

ಲಕ್ನೋ: ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಹುಜನ ಸಮಾಜ ಪಕ್ಷ (BSP) ಲೋಕಸಭಾ ಸದಸ್ಯ ಡ್ಯಾನಿಶ್ ಅಲಿ ಅವರನ್ನು ಶನಿವಾರ ಪಕ್ಷದಿಂದ ಅಮಾನತುಗೊಳಿಸಿದೆ.

ಬಿಎಸ್ ಪಿ ಉತ್ತರ ಪ್ರದೇಶ ಘಟಕವು ಸಂಕ್ಷಿಪ್ತ ಹೇಳಿಕೆಯಲ್ಲಿ, ಅಮ್ರೋಹಾ ಸಂಸದ ಅಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.

“ಅನೈತಿಕ ನಡವಳಿಕೆ” ಗಾಗಿ ಟಿಎಂಸಿ ಸದಸ್ಯ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವ ಸರಕಾರದ ನಿರ್ಣಯವನ್ನು ವಿರೋಧಿಸಿ ಅಲಿ ಶುಕ್ರವಾರ ಇತರ ವಿಪಕ್ಷದ ಸದಸ್ಯರೊಂದಿಗೆ ಲೋಕಸಭೆಯ ಕಲಾಪದಿಂದ ಹೊರನಡೆದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಕೆಲ ತಿಂಗಳುಗಳ ಹಿಂದೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್‌ ಬಿಧೂರಿ ಅವರಿಂದ ತೀವ್ರ ನಿಂದನೆಗೆ ಆಲಿ ಒಳಗಾಗಿದ್ದರು. ನಂತರ ಈ ಕುರಿತಂತೆ ಅಲಿ ಅವರು ಸಂಸತ್ತಿನ ನೈತಿಕ ಸಮಿತಿಗೆ ದೂರಿದ್ದರು.

Leave a Reply

Your email address will not be published. Required fields are marked *

error: Content is protected !!