May 9, 2026

ಬದಿಯಡ್ಕ: ಆಕಸ್ಮಿಕವಾಗಿ ಚಲಿಸಿ ಲಾರಿಯ ಚಕ್ರದಡಿಗೆ ಸಿಲುಕಿ ಚಾಲಕ ದಾರುಣ ಸಾವು:
ಗೇಟ್ ತೆರೆಯಲು ಇಳಿದಿದ್ದ ಚಾಲಕ

0
n5637843341702128295322e01bb336d9305498d95d5709ff9171e90c791d165f4634ca396b19489bd4fc37.jpg

ಬದಿಯಡ್ಕ: ಲಾರಿಯಡಿಗೆ ಸಿಲುಕಿ ಚಾಲಕ ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಬದಿಯಡ್ಕ ಸಮೀಪದ ನೀರ್ಚಾಲ್ ಗೋಳಿಯಡ್ಕದಲ್ಲಿ ಎಂಬಲ್ಲಿ ನಡೆದಿದೆ.

ಪಾಡಿ ಉತ್ತರತ್ತೋಡಿಯ ಮುಹಮ್ಮದ್ ನೌಫಲ್(23) ಮೃತಪಟ್ಟವರು. ಲಾರಿಯನ್ನು ಸ್ಟಾರ್ಟ್ ನಲ್ಲಿರಿಸಿ ಗೇಟ್ ತೆರೆಯಲು ಹೋದ ಸಂದರ್ಭದಲ್ಲಿ ಅದೇ ಲಾರಿ ಮುಂದಕ್ಕೆ ಸಂಚರಿಸಿ ಲಾರಿಯಡಿಗೆ ಸಿಲುಕಿ ಈ ದಾರುಣ ಘಟನೆ ನಡೆದಿದೆ.

ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!