March 21, 2026

ವಿಟ್ಲ: ಮಧ್ಯರಾತ್ರಿ ಕೇರಳ ಮೂಲದ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಟ:
ಮೂವರು ಯುವಕರನ್ನು ಪೊಲೀಸರ ವಶಕ್ಕೆ ನೀಡಿದ ಸ್ಥಳೀಯರು

0
IMG-20211203-WA0015

ವಿಟ್ಲ: ಕೇರಳದ ಮೂಲದ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರ ವಶಕ್ಕೆ ನೀಡಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಸೆರ್ಕಳ ಕಲ್ಲಮಜಲು ಎಂಬಲ್ಲಿ ನಡೆದಿದೆ.

ರಾತ್ರಿ 12ಗಂಟೆಯ ಸುಮಾರಿಗೆ ಕೇರಳ ನೋಂದಣಿಯ ಮಾರುತಿ ರಿಡ್ಜ್ ಕಾರಿನಲ್ಲಿ ಮೂವರು ಯುವಕರು ಅನುಮಾನಾಸ್ಪದವಾಗಿ ಮನೆಯೊಂದರ ಬಳಿ ನಿಂತಿದ್ದರು. ಸುದ್ದಿ ತಿಳಿದು ಸ್ಥಳೀಯರು ವಿಚಾರಿಸಿದಾಗ ಕೇರಳದ ವಡಗರ ಎಂದು ಅಸ್ಪಷ್ಟ ಮಾಹಿತಿ ನೀಡಿದ ಕಾರಣ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಸೆರ್ಕಳ ಸಲೀಂ ಎಂಬಾತ ನಮ್ಮನ್ನು ಬರುವಂತೆ ಹೇಳಿದ್ದು ಎಂದು ಈ ಮೂವರು ತಿಳಿಸಿದ್ದು, ಯಾವ ಉದ್ಧೇಶಕ್ಕಾಗಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೂವರ ಹೇಳಿಕೆಗಳು ಬೇರೆ ಬೇರೆ ರೀತಿಯಲ್ಲಿ ಇದ್ದಕಾರಣ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದು, ಮೂವರನ್ನೂ ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!