ಬಂಟ್ವಾಳ ಡಿವೈಎಸ್ಪಿಯಾಗಿ ಎಸ್.ವಿಜಯಪ್ರಸಾದ್ ಅಧಿಕಾರ ಸ್ವೀಕಾರ
ಬಂಟ್ವಾಳ: ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿ ಎಸ್.ವಿಜಯಪ್ರಸಾದ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿದ್ದ ಪ್ರತಾಪ್ ಸಿಂಗ್ ರಾಠೋಡ್ ಅವರು ಬೆಂಗಳೂರು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರ ತೆರವಾದ ಸ್ಥಾನಕ್ಕೆ ವಿಜಯಪ್ರಸಾದ್ ಅವರನ್ನು ನೇಮಕಗೊಳಿಸಿ ಆದೇಶಹೊರಡಿಸಿತ್ತು.
ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮವಾಗಿದ್ದು, ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಪ್ರಮುಖ ಮತ್ತು ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿ ಹಾಗೂ ಜನಮನ್ನಣೆ ಗಳಿಸಿದ ಅಧಿಕಾರಿಯಾಗಿದ್ದರು.
ಡಿ.ವೈ.ಎಸ್.ಯಾಗಿ ಭಡ್ತಿ ಹೊಂದಿದ ಮೇಲೆ ಅವರು ಲೋಕಾಯುಕ್ತದಲ್ಲಿ ಕರ್ತವ್ಯ ಮಾಡಿದ ಬಳಿಕ ಕಾರ್ಕಳ ತಾಲೂಕಿನಲ್ಲಿ ಡಿ.ವೈ.ಎಸ್.ಪಿ.ಯಾಗಿ ಕೆಲಸ ಮಾಡಿದ ಅನುಭವಿ. ಚುನಾವಣಾ ಸಂದರ್ಭದಲ್ಲಿ ಇವರನ್ನು ಚುನಾವಣಾ ನಿಯಮದಂತೆ ಕಾರವಾರ ಜಿಲ್ಲೆಗೆ ವರ್ಗಾವಣೆಗೊಳಿಸಲಾಗಿತ್ತು. ಚುನಾವಣೆ ಮುಗಿದಬಳಿಕ ರಾಜ್ಯ ಸರಕಾರದ ಆದೇಶದಂತೆ ಇವರನ್ನು ಬಂಟ್ವಾಳಕ್ಕೆ ವರ್ಗಾವಣೆಗೊಳಿಸಲಾಗಿದೆ.