ಉಡುಪಿ: ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದ ವಿಚಾರ: ಕೆಡಿಪಿ ಸಭೆಯಲ್ಲಿ ಸುನಿಲ್ ಕುಮಾರ್ -ಎಸ್‌ಪಿ ಅರುಣ್ ನಡುವೆ ಜಟಾಪಟಿ
ಉಡುಪಿ: ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಡಿಪಿ ಸಭೆಯಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್. ಕೆ ನಡುವೆ ಜಟಾಪಟಿ ನಡೆದಿದೆ.
ಲಾರಿ ಮುಷ್ಕರ ಮಾಡಿದ್ದ ವೇಳೆ ಪೊಲೀಸ್ ವರಿಷ್ಠಾಧಿಕಾರಿ ನೋಟಿಸ್ ನೀಡಿದ್ದು ಈ ಬಗ್ಗೆ ವಾಗ್ದಾಳಿ ನಡೇಸಿರುವ ಸುನೀಲ್ ಕುಮಾರ್, ಪ್ರತಿಭಟನೆ ಹೇಗೆ ಮಾಡಬೇಕು ಎಂದು ನೀವು ನಿರ್ಧರಿಸುತ್ತೀರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ನಿಬಂಧನೆಗಳನ್ನು ಹೇಳಿ. ನಾವು ಮನೆಯಲ್ಲಿ ಕೂತು ಭಜನೆ ಮಾಡಬೇಕಾ? ನಮ್ಮ ಜಿಲ್ಲೆಯಲ್ಲಿ ಹೇಗೆ ಪ್ರತಿಭಟನೆ ಮಾಡಬೇಕೆಂದು ನೀವೇ ಹೇಳಿ ಎಂದಿದ್ದಾರೆ.
ಮಾಜಿ ಸಚಿವರ ಮಾತಿಗೆ ತಿರುಗೇಟು ನೀಡಿರುವ ಎಸ್ಪಿ, ನಾನು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಕೆಲ ನಿಮಿಷಗಳ ಕಾಲ ಮಾತಿನ ಜಟಾಪಟಿ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್ ಸಮಾಧಾನ ಮಾಡಿದ್ದಾರೆ.