ಬಂಟ್ವಾಳ: ಸ್ಕೂಟರ್‌ಗೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ ಪೊಲೀಸರ ವಶಕ್ಕೆ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಮಧ್ಯೆ ಬಿಸಿರೋಡಿನಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿ ಕೊನೆಗೂ ಟ್ರಾಫಿಕ್ ಪೋಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಗಿರಿಯಪ್ಪ ಮೂಲ್ಯ ಜಾರಂದಗುಡ್ಡೆ ಎಂಬವರ ಸ್ಕೂಟರ್ ಗೆ ಐಶರ್ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಸಿರೋಡಿನ ಕೈಕುಂಜೆ ಕ್ರಾಸ್ ರಸ್ತೆಯಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಪಲ್ಟಿಯಾಗಿದೆ, ಸವಾರ ಗಿರಿಯಪ್ಪ ಅವರಿಗೆ ಗಾಯವಾಗಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿ ಹೊಡೆದ ಲಾರಿ ಸಾರ್ವಜನಿಕರು ನೋಡುತ್ತಿದ್ದಂತೆ ಅಲ್ಲಿಂದ ಲಾರಿ ಸಮೇತ ಎಸ್ಕೇಪ್ ಆಗಿದ್ದಾನೆ. ಆದರೆ ಬಿಸಿರೋಡಿನ ಪಾಯಿಂಟ್ ನಲ್ಲಿ ಕರ್ತವ್ಯ ಮಾಡುತ್ತಿದ್ದ ಟ್ರಾಫಿಕ್ ಸಿಬ್ಬಂದಿ ರಾಜು ಪೂಜಾರಿ ಅವರ ಗಮನಕ್ಕೆ ಸಾರ್ವಜನಿಕರು ಅಪಘಾತದ ವಿಚಾರ ತಿಳಿಸುತ್ತಿದ್ದಂತೆ ಲಾರಿಯನ್ನು ಬೆನ್ನಟ್ಟಿ ಬಂಟ್ವಾಳದ ಬಸ್ತಿಪಡ್ಪು ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಕುರಿತು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.