ಮಂಗಳೂರು: ಬ್ಯಾಂಕ್‌ಗೆ ಹಣ ಜಮೆ ಮಾಡಲು ಹೋಗಿದ್ದ ವ್ಯಕ್ತಿ ನಾಪತ್ತೆ
ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಬ್ಯಾಂಕ್‌ಗೆ ಹಣ ಜಮೆ ಮಾಡಲು ಹೋಗಿದ್ದ ಕೃಷ್ಣ ಪ್ರಸಾದ್ ಶೆಟ್ಟಿ (42) ಅವರು ನಾಪತ್ತೆಯಾಗಿದ್ದಾರೆ.
ಇವರು ಶೇರು ಮಾರುಕಟ್ಟೆಯ ವ್ಯವಹಾರ ನಡೆಸುತ್ತಿದ್ದು, ನ. 16ರಂದು ಅಪರಾಹ್ನ 3.45ಕ್ಕೆ ಬ್ಯಾಂಕ್‌ಗೆ ಹಣ ಜಮೆ ಮಾಡಲೆಂದು ಹೋಗಿದ್ದರು. ಸಂಜೆ 6ಕ್ಕೆ ಅವರ ತಂದೆಗೆ ಕರೆ ಮಾಡಿ ಶಿವಮೊಗ್ಗಕ್ಕೆ ಹೋಗುತ್ತಿದ್ದು, ನ. 17ರಂದು ಗೆಳೆಯರ ಜತೆಯಲ್ಲಿ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದರು. 6.30ಕ್ಕೆ ಶಿವಮೊಗ್ಗದ ಹೊಟೇಲ್‌ನಿಂದ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದರು.
ಮರುದಿನ ಬೆಳಗ್ಗೆ 11.30ಕ್ಕೆ ಅವರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. 11.48ಕ್ಕೆ ಮೆಸೇಜ್ ಮಾಡಿ ಮೊಬೈಲ್‌ನಲ್ಲಿ ಚಾರ್ಜ್ ಕಡಿಮೆ ಇದೆ. ಅನಂತರ ಕರೆ ಮಾಡುವುದಾಗಿ ತಿಳಿಸಿದ್ದರು. ಅನಂತರ ಸಂಪರ್ಕಕ್ಕೆ ಸಿಕಿಲ್ಲ ಎಂದು ಬಂದರು ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.