ವಿಶ್ವಕಪ್ ಫೈನಲ್ ಮ್ಯಾಚ್ ನೋಡುತ್ತಿದ್ದ ವೇಳೆ ಟಿವಿ ಮುಂದೆ ಕುಸಿದು ಬಿದ್ದು ಅಭಿಮಾನಿ ಸಾವು
ಹೈದರಾಬಾದ್: ವಿಶ್ವಕಪ್ ಫೈನಲ್ ನಲ್ಲಿ ಭಾರತದ ಸೋಲಿನಿಂದ ನಿರಾಸೆಗೊಂಡ ಅಭಿಮಾನಿಗಳ ಕನಸು ಭಗ್ನಗೊಂಡಿತ್ತು. ಅದೇ ರೀತಿ ಭಾರತದ ಸೋಲಿನಿಂದ ಹತಾಶೆಗೊಂಡ ಕ್ರಿಕೆಟ್ ಅಭಿಮಾನಿಯೊಬ್ಬರು ಟಿವಿ ನೋಡುತ್ತಿದ್ದಾಗಲೇ ಪ್ರಾಣ ಹೋಗಿರುವ ಘಟನೆ ತಿರುಪತಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಜ್ಯೋತಿಶ್ ಕುಮಾರ್ ಯಾದವ್ (35) ದೀಪಾವಳಿ ರಜೆಯ ಪ್ರಯುಕ್ತ ತನ್ನ ಊರಾದ ತಿರುಪತಿಗೆ ಬಂದಿದ್ದರು. ಕ್ರಿಕೆಟ್ ಅಭಿಮಾನಿಯಾಗಿದ್ದ ಜ್ಯೋತಿಶ್ ಭಾರತ – ಆಸೀಸ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಗೆಲುವಿನ ನಿರೀಕ್ಷೆಯಲ್ಲಿದ್ದ ಪಂದ್ಯ ಭಾರತ ಸೋಲಿನ ಹಂತಕ್ಕೆ ಬಂದಾಗ, ಟಿವಿ ನೋಡುತ್ತಿದ್ದ ಜ್ಯೋತಿಶ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಹತ್ತಿರದ ತಿರುಪತಿಯ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅವರು ಹೃದಯಾಘಾತವಾಗಿ ಆದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿರುವುದಾಗಿ ಮಾಹಿತಿ ದೊರಕಿದೆ.