ವಿಟ್ಲ: ವಿಟ್ಲದಿಂದ ಕನ್ಯಾನ ಮೂಲಕ ಬಾಯಾರು ಕಡೆಗೆ ಸಂಚರಿಸುತ್ತಿದ್ದ ಹುಂಡೈ ಕಾರು ಬೈರಿಕಟ್ಟೆ ಸಮೀಪದ ಆನೆಪದವು ಭಜನಾ ಮಂದಿರದ ಬಳಿಯ ಕೃಷ್ಣ ನಾಯ್ಕರ ಮನೆಯಂಗಳಕ್ಕೆ ಪಲ್ಟಿ ಹೊಡೆದಿದೆ.
ಕಾರು 40 ಅಡಿ ಆಳಕ್ಕೆ ಬಿದ್ದು ಜಖಂಗೊಂಡಿದ್ದರೂ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪವಾಡ ಸದೃಶವಾಗಿ ಪಾರಾಗಿದ್ದಾರೆ.