ಪುತ್ತೂರು: ನೀರಿಗೆ ಇಳಿದಿದ್ದ ವೇಳೆ ಹೃದಯಾಘಾತ:
ಬೊಳುವಾರಿನ ಮೆಕ್ಯಾನಿಕ್ ಯುವಕ ಮೃತ್ಯು
ಪುತ್ತೂರು: ನೀರಿಗಿಳಿದಿದ್ದ ವೇಳೆ ಹೃದಯಾಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟ ಘಟನೆ ಇರ್ದೆ ಬೇಂದ್ರ್ ತೀರ್ಥ ಬಳಿ ನಡೆದಿದೆ.
ದೇವಸ್ಯ ನಿವಾಸಿ ಸುಜಿತ್ (27) ಮೃತ ಯುವಕ.
ಸುಜಿತ್ ರವರು ಇರ್ದೆ ಬೇಂದ್ರ್ ತೀರ್ಥ ಬಳಿ ಇರುವ ಸಂಬಂಧಿಕರ ಮನೆಗೆ ತೆರಳಿದ್ದು, ಈ ವೇಳೆ ನೀರಿಗಿಳಿದಿದ್ದು, ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆನ್ನಲಾಗಿದೆ.
ಸುಜಿತ್ ಬೊಳುವಾರಿನ ಗ್ಯಾರೇಜ್ ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಮನೆಯವರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.





