BJP ರಾಜ್ಯಾಧ್ಯಕ್ಷರನ್ನು ಭೇಟಿಯಾದ ಪುತ್ತಿಲ ಪರಿವಾರ
ಪುತ್ತೂರು: ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ‘ಪುತ್ತಿಲ ಪರಿವಾರ’ ನಾಯಕರು ಶಿವಮೊಗ್ಗದ ನಿವಾಸಕ್ಕೆ ತೆರಳಿ ಭೇಟಿ ಮಾಡಿರುವ ಬೆಳವಣಿಗೆ ಕರಾವಳಿಯ ರಾಜಕೀಯದಲ್ಲಿ ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.
ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾಡ್ತಾ ನೇತೃತ್ವದ ತಂಡದಲ್ಲಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ, ಸುಧೀಶ್ ಶೆಟ್ಟಿ ಕಂಪ ಮತ್ತಿತರರಿದ್ದರು. ಭೇಟಿ ವೇಳೆ ವಿಜಯೇಂದ್ರರಿಗೆ ಪುತ್ತೂರು ಮಹಾಲಿಂಗೇಶ್ವರ ದೇವರ ಬೆಳ್ಳಿಯ ಸ್ಮರಣಿಕೆ ನೀಡಿ ಗೌರವಿಸಿದ ನಾಯಕರು, ಪುತ್ತೂರಿನ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಭೆಟಿಯಲ್ಲಿ ಅರುಣ್ ಪುತ್ತಿಲ ಇಲ್ಲದಿದ್ದರೂ ಪುತ್ತಿಲ ಪರಿವಾರದ ಪ್ರಮುಖ ನಾಯಕರು ಭೇಟಿ ಮಾಡಿ ಶುಭಕೋರಿದ್ದಾರೆ. ಇದು ಔಪಚಾರಿಕ ಭೇಟಿ ಎನ್ನಲಾಗುತ್ತಿದ್ದರೂ ಹೊಸ ರಾಜಕೀಯ ಬೆಳವಣಿಗೆಗ ನಾಂದಿಯಾಗುವ ಸಾಧ್ಯತೆಯೊಂದು ಗೋಚರಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಿಡಿದೆದ್ದ’ಪುತ್ತಿಲ ಪರಿವಾರ’ ನಾಯಕರು ಇದೀಗ ವಿಜಯೇಂದ್ರರನ್ನು ಭೇಟಿ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ.





