ಕೊಡಗು: ಪುರಾತನ ಕಾಲದ ಚಿನ್ನಾಭರಣವುಳ್ಳ ನಿಧಿ ಪತ್ತೆ
ಕೊಡಗು: ಪುರಾತನ ಕಾಲದ ಚಿನ್ನಾಭರಣವುಳ್ಳ ನಿಧಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರದ ಅಮ್ಮತಿ ಮುಖ್ಯ ರಸ್ತೆಯಲ್ಲಿರುವ ಆನಂದಪುರ ಗ್ರಾಮದಲ್ಲಿ ನಡೆದಿದೆ.
ಆನಂದಪುರ ಗ್ರಾಮದಲ್ಲಿ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಪುರಾತನಕಾಲದ ಈಶ್ವರ ದೇವಸ್ಥಾನವಿದ್ದು, ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಭೂಮಿಯ ಅಡಿಯಲ್ಲಿ ಪ್ರಾಚಿನ ಕಾಲದ ಕೆಲ ವಸ್ತುಗಳು ಪತ್ತೆಯಾದವು.





