ಪ್ರೀತಿಸಲು ಒಪ್ಪದ ಯುವತಿಯ ಫೋಟೊವನ್ನು ನಗ್ನ ಚಿತ್ರಕ್ಕೆ ಎಡಿಟ್ ಮಾಡಿ ಬ್ಲ್ಯಾಕ್ ಮೇಲ್: ಆರೋಪಿಯ ಬಂಧನ
ಬೆಳಗಾವಿ: ಪ್ರೀತಿಸಲು ಒಪ್ಪದ ಯುವತಿಯ ಫೋಟೋವನ್ನು ನಗ್ನ ಚಿತ್ರವೊಂದಕ್ಕೆ ಜೋಡಿಸಿ ಎಡಿಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧನಕ್ಕೊಳಗಾದ ಆರೋಪಿಯನ್ನು ಮಂಥನ್ ಪಾಟೀಲ್ (22) ಎಂದು ಗುರುತಿಸಲಾಗಿದೆ. ಆರೋಪಿ ಖಾನಾಪುರದ ಕಾಲೇಜಿನ ವಿದ್ಯಾರ್ಥಿನಿ ಒಬ್ಬಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ.
ಆಕೆ ಒಪ್ಪದಿದ್ದಾಗ ಆಕೆಯ ಫೋಟೋವನ್ನು ನಗ್ನ ಚಿತ್ರದ ಜೊತೆ ಸೇರಿಸಿ ಎಡಿಟ್ ಮಾಡಿ ಕಿರುಕುಳ ಕೊಟ್ಟಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದೆ ಆಕೆಯ ಮೂವರು ಸ್ನೇಹಿತೆಯರ ಫೋಟೋ ಬಳಸಿ ಇದೇ ರೀತಿ ಬ್ಲಾಕ್‍ಮೇಲ್ ಮಾಡಿದ್ದಾನೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಅಲ್ಲಿ ಅಪ್ಲೋಡ್ ಮಾಡಿದ್ದಾನೆ.





