ನಟ, ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫ್ ನಿಧನ
ತಿರುವನಂತಪುರಂ: ಖ್ಯಾತ ಮಲಯಾಳಂ ನಟ ಹಾಗೂ ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫ್ ಗುರುವಾರ ಕೊಚ್ಚಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಎರ್ನಾಕುಲಂ ಜಿಲ್ಲೆಯ ಮತ್ತಂಚೇರಿಯ ಹಮ್ಜಾ ಮತ್ತು ಜುಬೈದಾ ದಂಪತಿಯ ಪುತ್ರನಾಗಿದ್ದ ಮುಹಮ್ಮದ್ ಹನೀಫ್ ಮೂಕಾಭಿನಯ ನಟರಾಗಿದ್ದರು. ನಾಟಕದ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ ಅವರು ನಂತರ ಮಲಯಾಳಂ ಚಿತ್ರರಂಗದಲ್ಲಿ ಸಣ್ಣ ಪಾತ್ರಗಳೊಂದಿಗೆ ಸಕ್ರಿಯರಾದರು. ಕೇರಳದಲ್ಲಿ ಮಿಮಿಕ್ರಿ ಕಲೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಿದ್ಧ ಪ್ರದರ್ಶನ ತಂಡದ ಕಲಾಭವನದ ಸದಸ್ಯರಾಗಿದ್ದರು.





