ವಿಟ್ಲ: ರಕ್ಷ ಪರೀಕ್ಷೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ ಯಡವಟ್ಟು: ರಕ್ಷಾ ಕ್ಲಿನಿಕ್ ಆ್ಯಂಡ್ ಲ್ಯಾಬೋರೇಟರಿಗೆ ಬೀಗ ಜಡಿದ ಅಧಿಕಾರಿಗಳು
ವಿಟ್ಲ: ರಕ್ಷ ಪರೀಕ್ಷೆ ನಡೆಸಿದ ಪ್ರಯೋಗಾಲಯದ ಯಡವಟ್ಟು ವರದಿಯಲ್ಲಿ, ರಕ್ತದ ಪೇಟ್ಲೇಟ್ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ವಿಚಾರಿಸಲು ತೆರಳಿದ ವ್ಯಕ್ತಿಗೆ ಉಡಾಫೆಯ ಉತ್ತರ ನೀಡಿರುವ ವಿಚಾರಕ್ಕೆ ಸಂಬಂದಿಸಿದಂತೆ ಸಂತ್ರಸ್ತ ವ್ಯಕ್ತಿಯೋರ್ವರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಟ್ಲ ಚಂದಳಿಕೆಯಲ್ಲಿ ಕೆಲಸಮಯದ ಹಿಂದೆ ಆರಂಭಗೊಂಡ ರಕ್ಷಾ ಕ್ಲಿನಿಕ್ ಆ್ಯಂಡ್ ಲ್ಯಾಬೋರೇಟರಿಗೆ ಜಿಲ್ಲಾ ಆರೋಗ್ಯ ಅಧಿಕಾರಿ, ಹಾಗೂ ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರದ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ ಬೀಗ ಜಡಿದ ಘಟನೆ ಫೆ.20ರಂದು ನಡೆದಿದೆ.
ಬಂಟ್ವಾಳ ತಾಲೂಕು ಬದನಾಜೆ ಸಮೀಪದ ನಿವಾಸಿ, ಕಿಯಾನ್ಶ್ ಹರ್ಬಲ್ ಸೆಂಟರ್ ಕಂಪೆನಿಯ ಮಾಲಕರಾಗಿರುವ ಡಾ.ಶರತ್ ಶೆಟ್ಟಿರವರು ದೂರು ನೀಡಿದವರಾಗಿದ್ದಾರೆ.
ಫೆ.15ರಂದು ವಿಟ್ಲ – ಕಬಕ ರಸ್ತೆಯ ಚಂದಳಿಕೆ ಪರಿಸರದಲ್ಲಿ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿನಲ್ಲಿ ಸಿಬಿಸಿ ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇನೆ. ಬೆಳಗ್ಗೆ ಸುಮಾರು 10.50 ಗಂಟೆಗೆ ನಾನು ರಕ್ತ ನೀಡಿದ್ದು, ಅದರ ಸಂಪೂರ್ಣ ರಿಪೋರ್ಟ್ ನನಗೆ 11.03 ಗಂಟೆಗೆ ವಾಟ್ಸಪ್ ಮೂಲಕ ಕಳಿಸಿದ್ದಾರೆ. ಆ ರಿಪೋರ್ಟ್ ನಲ್ಲಿ ಹಿಮೋಗ್ಲೋಬಿನ್ 14 ತೋರಿಸುತ್ತಿದೆ ಹಾಗೆಯೇ ಪ್ಲೇಟೈಟ್ 18000 ತೋರಿಸುತ್ತಿದೆ. ಆ ರಿಪೋರ್ಟ್ ನ್ನು ನೋಡಿ ಕೂಡಲೇ ರಕ್ಷಾ ಕ್ಲಿನಿಕ್ ಗೆ ಕಾಲ್ ಮಾಡಿ ನೀವು ಮಾಡಿರುವಂತಹ ರಿಪೋರ್ಟ್ ಸರಿ ಇದೆಯೇ ಎಂದು ಕೇಳಿದಾಗ ಅಲ್ಲಿಯ ಸಿಬ್ಬಂದಿ ನಾವು ಮಾಡಿರುವಂತಹ ರಿಪೋರ್ಟ್ ಸರಿ ಇದೆ ನೀವು ಬೇರೆ ಎಲ್ಲಿ ಸಹ ಮಾಡಿಸಿ ತೊಂದರೆ ಇಲ್ಲ ನಾವು ನಮ್ಮ ವೈದ್ಯರಲ್ಲಿ ತೋರಿಸಿ ನಿಮಗೆ ಈ ರಿಪೋರ್ಟ್ ವಾಟ್ಸಾಪ್ ಮುಖಾಂತರ ಕಳಿಸಿದ್ದೇನೆ. ನನಗೆ ಈ ರಿಪೋರ್ಟ್ ನೋಡಿ ಅತಿ ಹೆಚ್ಚು ವ್ಯತ್ಯಾಸ ಕಂಡು ಬಂದಿದ್ದು ನಾನು ಕೂಡಲೇ 11.30ರ ಸುಮಾರಿಗೆ ವಿಟ್ಲದಲ್ಲಿರುವ ಧನ್ವಂತರಿ ಹಾಗೂ ವಿಕೇರ್ ಲ್ಯಾಬ್ ನಲ್ಲಿ ಪೇಟ್ಲೇಟ್ ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇನೆ. ಆ ರಿಪೋರ್ಟ್ ನಲ್ಲಿ ನನಗೆ ವಿಕೇರ್ ಲ್ಯಾಬ್ ನಲ್ಲಿ 1 ಲಕ್ಷ ಮತ್ತು ಧನ್ವಂತರಿ ಲ್ಯಾಬೋರೇಟರಿ ಯಲ್ಲಿ 1.13ಲಕ್ಷ ತೋರಿಸಿದೆ. ಸರಿಯಾದ ಮಾಹಿತಿ ಸಿಕ್ಕಿದ್ದು ಅದನ್ನು ನೋಡಿ ನಾನು ಹಿಂತಿರುಗಿ ಚಂದಳಿಕೆ ಪರಿಸರದಲ್ಲಿರುವ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ಬಂದು ಕೇಳಿದೆ ನನ್ನ ರಿಪೋರ್ಟ್ ಗೆ ಸಹಿ ಹಾಕಿ ಕೊಡಿ ಎಂದು ಕೇಳಿದಾಗ ಅಲ್ಲಿಯ ವೈದ್ಯರು ನಿರಾಕರಿಸಿ, ವಿಟ್ಲದಲ್ಲಿ ಕ್ಲಿನಿಕ್ ಮಾಡಲು ಟಿ ಹೆಚ್ ಓ ಹಾಗೂ ಡಿ ಹೆಚ್ ಓ ಅವರನ್ನು ಸೆಟ್ಟಿಂಗ್ ಮಾಡಿದ್ದೇವೆ ನೀವು ಯಾರಿಗೆ ಬೇಕಾದರೂ ಕಂಪ್ಲೆಂಟ್ ಮಾಡಿ ನಾವು ಹೆದರಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿ ನನಗೆ ಆಘಾತವಾಗಿತ್ತು ಹಾಗೆಯೇ ನನಗೆ ಬೇರೆ ಉಪಾಯವಿಲ್ಲದೆ ವಿಟ್ಲ ಪೋಲಿಸ್ ಠಾಣಾ ಅಧಿಕಾರಿಗೆ ದೂರು ನೀಡಲು ಬಂದೆ ನಂತರ ಪೊಲೀಸ್ ಅಧಿಕಾರಿಗಳು ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೋರೇಟರಿ ಮಾಲಕರಾದ ಚಿನ್ಮಯ್ ಅವರಲ್ಲಿ ಮಾತನಾಡಿದರು ಚಿನ್ಮಯ್ ಅವರು ಪೊಲೀಸರಿಗೆ ನಿಮಗೆ ಸಾಧ್ಯವಾದರೆ ನಮ್ಮ ಕ್ಲಿನಿಕ್ ನಿಂದ ಒಂದು ಸೀಲ್ ಅಥವಾ ಸಹಿ ಹಾಕಿಸಿ ಎಂದು ಅವರಿಗೆ ಚಾಲೆಂಜ್ ಮಾಡಿದ್ದರು. ಲ್ಯಾಬೊರೇಟೊರಿ ಸಿಬ್ಬಂದಿಗಳು ನಮ್ಮಲ್ಲಿ ತುಂಬಾ ಉಡಾಫೆಯಿಂದ ಮಾತನಾಡಿದ್ದು, ಅವರು ಯಾರನ್ನು ಸೆಟ್ಟಿಂಗ್ ಮಾಡಿದ್ದಾರೆ ಅನ್ನೋದು ನನಗೆ ಸರಿಯಾಗಿ ತಿಳಿಯಲಿಲ್ಲ. ಆದರೆ ಅದು ನನಗೆ ಅಗತ್ಯವಿಲ್ಲ ತಕ್ಷಣವೇ ಮೇಲ್ಕಂಡ ದೂರಿಗೆ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಂಡು ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೋರೇಟರಿಯನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಬಂದ್ ಮಾಡದಿದ್ದರೆ ಶಿಫಾರಸ್ಸು ಮಾಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡುತ್ತೇವೆ ಎಂದು ಡಾ. ಶರತ್ ಶೆಟ್ಟಿಯವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ತಾಲೂಕು ಆರೋಗ್ಯ ಕೇಂದ್ರ ಅಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು. ಅವರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ, ಹಾಗೂ ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿ ಬೀಗ ಜಡಿದಿದೆ ಎಂದು ಮಾಹಿತಿ ಲಭಿಸಿದೆ. ವಿಟ್ಲ ಠಾಣಾ ಪೊಲೀಸರು ಭದ್ರತೆ ಏರ್ಪಡಿಸಿದ್ದರು.




