ಬೆಳ್ತಂಗಡಿ: ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು: ಬಾಳೆಗಿಡಗಳ ನಾಶ
ಬೆಳ್ತಂಗಡಿ: ದಿನೇ ದಿನೇ ಕಾಡಾನೆಗಳ ಹಾವಳಿ ಹೆಚ್ಚಾಗುತಿದೆ.
ಬೆಳ್ತಂಗಡಿಯ ನಿಡಿಗಲ್ ಬಳಿಯ ಕಲ್ಮಂಜ ಬೆರ್ಕೆ ನಿವಾಸಿಯಾಗಿರುವ ಪ್ರಶಾಂತ್ ಕಾಕತ್ತರ್ ಎಂಬವರ ತೋಟಕ್ಕೆ ಗುರುವಾರ ರಾತ್ರಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಬಾಳೆಗಿಡಗಳನ್ನು ತುಳಿದು ಪುಡಿ ಮಾಡಿದೆ ಅಪಾರ ನಷ್ಟ ಉಂಟಾಗಿದೆ.
ಬೆಳ್ತಂಗಡಿ, ಪುತ್ತೂರು, ಸುಳ್ಯ ಕಡಬ ತಾಲೂಕು ಸೇರಿದಂತೆ ಇನ್ನಿತರ ಕಡೆ ಆನೆಗಳ ಹಾವಳಿಗಳಿಂದ ರೈತರು ಕಂಗೆಟ್ಟಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಕಾಡಾನೆಗಳ ಹಿಂಡು ತೋಟಕ್ಕೆ ದಾಳಿ ನಡೆಸಿದ ಪರಿಣಾಮ ರೈತರು ಬೆಳೆದ ಬೆಳೆಗಳು ಕಾಡಾನೆಗಳ ಪಾಲಾಗಿವೆ.





