ಗಾಝಾಪಟ್ಟಿ ಮಕ್ಕಳ ಸ್ಮಶಾನವಾಗುತ್ತಿದೆ: ವಿಶ್ವಸಂಸ್ಥೆ ಕಳವಳ
ನ್ಯೂಯಾರ್ಕ್: ಗಾಝಾಪಟ್ಟಿ ಮಕ್ಕಳ ಸ್ಮಶಾನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ತಕ್ಷಣವೇ ಕದನವಿರಾಮ ಘೋಷಿಸಬೇಕೆಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗ್ಯುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಗಾಝಾಪಟ್ಟಿಯಲ್ಲಿನ ಪರಿಸ್ಥಿತಿ ಕೇವಲ ಮಾನವ ಸಂಘರ್ಷವಲ್ಲ, ಆದರೆ ಇದೊಂದು ಮಾನವೀಯತೆಯ ನೆಲೆಯದ್ದಾಗಿದೆ. ಕದನ ವಿರಾಮ ವಿಚಾರದಲ್ಲಿ ಎರಡು ದೇಶಗಳು ಮಾತ್ರ ಭಾಗಿಯಾಗುವುದಲ್ಲ, ಅಂತಾರಾಷ್ಟ್ರೀಯ ಸಮುದಾಯ ಕೂಡಾ ಗಮನಹರಿಸಬೇಕು ಎಂದು ಗ್ಯುಟೆರಸ್ ತಿಳಿಸಿದ್ದಾರೆ.
ಗಾಝಾಪಟ್ಟಿಗೆ ಮಾನವೀಯತೆಯ ನೆರವಿನ ಅಗತ್ಯವಿದೆ. ಯುದ್ಧದಿಂದಾಗಿ ಸಾವಿರಾರು ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆ, ಔಷಧ, ಚಿಕಿತ್ಸೆಗಳಿಲ್ಲದೇ ಸಾವಿರಾರು ಮಂದಿ ಕಂಗಾಲಾಗಿದ್ದಾರೆ ಎಂದು ವರದಿ ವಿವರಿಸಿದೆ.
ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನ ಭಯೋತ್ಪಾದನಾ ವೈಮಾನಿಕ ದಾಳಿ ನಡೆಸುತ್ತಿದ್ದು, ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ.