December 19, 2025

ಕಾಸರಗೋಡು: ಬಸ್ಸು – ಸ್ಕೂಟರ್ ನಡುವೆ ಅಪಘಾತ: ಯುವಕ ಸ್ಥಳದಲ್ಲೇ ಮೃತ್ಯು

0
image_editor_output_image870011072-1699029436191.jpg

ಕಾಸರಗೋಡು: ಬಸ್ಸು ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಬೋವಿಕ್ಕಾನದಲ್ಲಿ ನಡೆದಿದೆ.

ಪ್ಲಂಬಿಂಗ್ ಕೆಲಸಗಾರ, ವೆಳ್ಳರಿಕುಂಡುವಿನ ಶರತ್ ದಾಮೋದರನ್ (26) ಮೃತರು. ಇವರು ಬೋವಿಕ್ಕಾನದಿಂದ ಕಾನತ್ತೂರಿಗೆ ತೆರಳುವ ರಸ್ತೆಯ ಚಿಪ್ಲಿಕಾಯ ಎಂಬಲ್ಲಿ ಈ ಅಪಘಾತ ನಡೆದಿದೆ. ಬಸ್ಸು ಕಾಸರಗೋಡಿನಿಂದ ಕುತ್ತಿಕೋಲ್ ಗೆ ತೆರಳುತ್ತಿತ್ತು.

ಅಪಘಾತದ ತೀವ್ರತೆಗೆ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದೂರು ಠಾಣಾ ಪೊಲೀಸರು ಸ್ಥಳಕ್ಕೆ ಮಹಜರು ನಡೆಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!