ಸುಳ್ಯ: ಏಕಾಏಕಿ ಭೂಮಿ ಕುಸಿತ:
ಬೃಹತ್ ಹೊಂಡ ನಿರ್ಮಾಣ
ಸುಳ್ಯ: ಕೆಲ ಸಮಯದ ಹಿಂದೆ ಸುರಿದ ಭಾರೀ ಮಳೆಗೆ ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣವಾದ ಘಟನೆ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ನಡೆದಿದ್ದು, ಸಮೀಪವಿದ್ದ ವಿದ್ಯುತ್ ಕಂಬ ಧರೆಗುರುಳಿದೆ.
ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದ್ದು, ಪಕ್ಕದಲ್ಲಿರುವ ವಿದ್ಯುತ್ ಕಂಬ ಬೀಳುವ ಹಂತಕ್ಕೆ ತಲುಪಿತ್ತು. ಹೊಂಡ ನಿರ್ಮಾಣವಾದ ಸ್ವಲ್ಪ ಸಮಯದ ಬಳಿಕ ವಿದ್ಯುತ್ ಕಂಬ ನೆಲಕ್ಕುರುಳಿದೆ.
ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.





