ಕೈಯಲ್ಲಿ ಖಡ್ಗ ಹಿಡಿದು ಐಪಿಎಸ್ ಅಧಿಕಾರಿ: ಫೋಟೊ ವೈರಲ್
ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಡಿಫರೆಂಟ್ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ಯಾಶನ್ ಡಿಸೈನರ್ ಹಾಗೂ ಸೆಲೆಬ್ರೆಟಿ ಸ್ಟೈಲಿಸ್ಟ್ ಭಾರ್ಗವಿ ಕೆ.ಆರ್ ಅವರು ಕ್ಯಾಮಾರಾದಲ್ಲಿ ರೂಪಾ ಅವರ ವಿಶೇಷ ರೀತಿಯ ಪೋಟೋ ಶೂಟ್ ಮಾಡಿಸಿಕೊಂಡಿದ್ದಿ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಈ ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳಾ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ’ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಕೆಂಪು ಬಣ್ಣದ ರೇಷ್ಮೆ ಸೀರೆ, ಮೈ ತುಂಬಾ ಆಭರಣ ತೊಟ್ಟು, ಕೈಯಲ್ಲಿ ಖಡ್ಗ ಹಿಡಿದು ವೀರ ಮಹಿಳೆಯಂತೆ ಮಿಂಚಿದ್ದಾರೆ.




