March 18, 2026

ಉಡುಪಿ: ಡಿವೈಡರ್ ಗೆ ಢಿಕ್ಕಿ ಹೊಡೆದ ಬೈಕ್: ಹಿರಿಯಡ್ಕದ ಯುವಕ ಸಾವು

0
image_editor_output_image-1517898491-1697608669304.jpg

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಬೈಕೊಂದು ಡಿವೈಡರ್ ಗೆ ಹೊಡೆದ ಪರಿಣಾಮ ಸವಾರ ಯುವಕ ಮೃತಪಟ್ಟ ಘಟನೆ ಉಡುಪಿ ಮಣಿಪಾಲದ ಪರ್ಕಳ ಹೆದ್ದಾರಿಯ ಬಿ.ಎಂ.ಸ್ಕೂಲ್ ಬಳಿ ಬುಧವಾರ ಮುಂಜಾನೆ ಸಂಭವಿಸಿದೆ.

ಹಿರಿಯಡ್ಕ ನಿವಾಸಿ ಅಕ್ಷಯ ಭಟ್(26) ಮೃತ ಯುವಕನಾಗಿದ್ದಾನೆ.

ಬಾಣಸಿಗನಾಗಿದ್ದ ಅಕ್ಷಯ್ ಭಟ್ ಇಂದ್ರಾಳಿಯ ದೇವಸ್ಥಾನವೊಂದರಲ್ಲಿ ನವರಾತ್ರಿಯ ಸಾರ್ವಜನಿಕ ಅನ್ನಸಂತರ್ಪಣೆಯ ಅಡುಗೆ ಕೆಲಸ ನಿರ್ವಹಿಸಲು ಮುಂಜಾನೆ ಮನೆಯಿಂದ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಅಕ್ಷಯ ಭಟ್ ತಲೆಗೆ ತೀವ್ರ ತರಹದ ಗಾಯಗಳಾಗಿತ್ತು.

ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಮಣಿಪಾಲದ ಪೊಲೀಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕಾರದೊಂದಿಗೆ ಆಸ್ವತ್ರೆಗೆ ದಾಖಲಿಸಿದ್ದಾರೆ.

ಆದರೆ ಚಿಕಿತ್ಸೆ ಪಡೆಯುವಾಗಲೇ ಅಕ್ಷಯ್ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!