March 18, 2026

ಭಟ್ಕಳ ಬೈಪಾಸ್ ಬ್ರಿಡ್ಜ್ ಸಮೀಪ ಅಪಘಾತ: ಉಡುಪಿ ಮೂಲದ ಮಹಿಳೆ ಮೃತ್ಯು

0
image_editor_output_image379305254-1697608337727.jpg

ಭಟ್ಕಳ: ಕಾರು ಹಾಗೂ ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಹಿನ್ನೆಲೆ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ತಾಲೂಕಿನ ಮೂಡ ಭಟ್ಕಳ ಬೈಪಾಸ್ ಬ್ರಿಡ್ಜ್ ಸಮೀಪ ನಡೆದಿದೆ.

ಮೃತ ಮಹಿಳೆಯನ್ನು ಉಡುಪಿಯ ಉದ್ಯಾವರ ನಿವಾಸಿ ರೀಟಾ ಡಿಸೋಜಾ ಹಾಗೂ ತೀವ್ರ ಗಾಯಗೊಂಡವರನ್ನು ಮೃತ ಮಹಿಳೆಯ ಪತಿ ಜೇವಿಯರ್ ರಾಜ್ ಡಿಸೋಜಾ ಮತ್ತು ಪುತ್ರಿ ಇನ್ನಿಕಾ ಎಂದು ತಿಳಿದು ಬಂದಿದೆ.

ಇವರು ಕಾರಿನಲ್ಲಿ ತಮ್ಮ ಪತಿ ಹಾಗೂ ಮಗಳೊಂದಿಗೆ ಉಡುಪಿ ಕಡೆಯಿಂದ ಗೋವಾ ಕಡೆಗೆ ಹೋಗುವ ವೇಳೆ ಮುರುಡೇಶ್ವರ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಅಪಘಾತವಾಗಿದೆ.

ತಕ್ಷಣ ಕಾರಿನಲ್ಲಿ ಸಿಲುಕಿ ಹಾಕಿಕೊಂಡ ಗಾಯಾಳುಗಳನ್ನು ಸ್ಥಳೀಯರು ರಕ್ಷಣೆ ಮಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ರೀಟಾ ಅವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಕಾರು ಚಲಾಯಿಸುತ್ತಿದ್ದ ಜೇವಿಯರ್ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರಿಗೆ ಸಣ್ಣ ಪುಟ್ಟ ಗಾಯಾಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!