February 4, 2026

ಮಂಗಳೂರು: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕ ಮೃತ್ಯು:
ಬಾಲಕನ ಅಂಗಾಂಗ ದಾನ

0
image_editor_output_image1414625492-1697553362313.jpg

ಮಂಗಳೂರು: ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನೋರ್ವ, ಹೃದಯ ಸ್ತಂಭನದಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತ ಬಾಲಕನನ್ನು ಅತ್ತಾವರದ ಅಲ್ಫೋನ್ಸ್ ಡಿಸೋಜಾ ಹಾಗೂ ಸೋನಿಯಾ ಡಿಸೋಜಾ ದಂಪತಿಗಳ ಪುತ್ರ, 8 ನೇ ತರಗತಿಯಲ್ಲಿ ಅಭ್ಯಾಸುತ್ತಿದ್ದ ಆಶಿಶ್ ಡಿಸೋಜಾ(13) ಎಂದು ಗುರುತಿಸಲಾಗಿದೆ.

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಆಶಿಶ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿರುವಂತೆಯೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಸದಾ ಚುರುಕುತನದಿಂದ ಇದ್ದ ಆಶಿಶ್, ಇಗರ್ಜಿಯ ಬಲಿಪೀಠ ಸೇವಾ ಸಂಘದ ಸದಸ್ಯನಾಗಿದ್ದರು. ಪುತ್ರನನ್ನು ಅಗಲಿದ ನೋವಿನಲ್ಲಿ ಹೆತ್ತವರು ‌ಅಂಗಾಂಗ ಹಾಗೂ ದೇಹ ದಾನ ಮಾಡಿ ಹಲವರ ಬಾಳಿಗೆ ಬೆಳಕಾಗಲು ಮುಂದಾಗಿ ಸಾರ್ಥಕತೆ ಮೆರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!