February 4, 2026

ಉಡುಪಿ: ಪೈಪ್ ಸ್ಟೋರೇಜ್ ಯಾರ್ಡ್‌ ನಲ್ಲಿ ಆಕಸ್ಮಿಕ ಬೆಂಕಿ ಅವಘಡ
 

0
image_editor_output_image1879468529-1697548917548.jpg


ಉಡುಪಿ: ಕಲ್ಯಾಣಪುರದ ಸನಿಹವಿರುವ ವಾರಾಹಿ ನೀರಿನ ಪೈಪ್‌ಲೈನ್ ಕಂಪನಿಯ ಸ್ಟೋರೇಜ್ ಯಾರ್ಡ್‌ ನಲ್ಲಿ ಅ.17 ರಂದು ಅಗ್ನಿ ಅಕಸ್ಮಿಕ ಸಂಭವಿಸಿದೆ.

ಬಾಬಾ ಸೋಡ ಸಮೀಪದ ಪಕ್ಕಿಬೆಟ್ಟು ಸಂತೆಕಟ್ಟೆ ಬಳಿ ವರಾಹಿ ನದಿ ನೀರು ಯೋಜನೆಗಾಗಿ ಗುತ್ತಿಗೆ ಪಡೆದ ಕಂಪನಿಯೂ ಪೈಪ್ ಗಳನ್ನು ಗೋಡಾನ್ ನಲ್ಲಿ ಸಂಗ್ರಹಿಸಿಟ್ಟಿದ್ದು, ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಸ್ಟೋರೇಜ್ ಯಾರ್ಡ್‌ ನಲ್ಲಿ ವ್ಯಾಪಕವಾಗಿ ಬೆಂಕಿ ಹರಡಿದ್ದು, ದಟ್ಟವಾಗಿ ಹೊಗೆಆವರಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ- ಆಗಮಿಸಿ ಸ್ಥಳೀಯರು, ಪೊಲೀಸರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ.

Leave a Reply

Your email address will not be published. Required fields are marked *

error: Content is protected !!