August 25, 2026

ಕಿನ್ನಿಗೋಳಿ: ಟಿಪ್ಪರ್ ಢಿಕ್ಕಿ- ಬಸ್ಸಿನಲ್ಲಿದ್ದ ಮೂವರು ವಿದ್ಯಾರ್ಥಿಗಳಿಗೆ ಗಾಯ

0
image_editor_output_image381113254-1697524726246.jpg

ಕಿನ್ನಿಗೋಳಿ: ಕಿನ್ನಿಗೋಳಿ ಕಟೀಲು ಹೆದ್ದಾರಿಯ ಬಲ್ಲಾಣ ಚರ್ಚ್ ಬಳಿ ತಿರುವಿನಲ್ಲಿ ಟಿಪ್ಪರ್ ಬಸ್ಸಿಗೆ ಢಿಕ್ಕಿ ಹೊಡೆದಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರ ಪೈಕಿ ಕಿನ್ನಿಗೋಳಿ ಪಕ್ಷಿಕೆರೆಯ ಮೂವರು ವಿದ್ಯಾರ್ಥಿಗಳು ಗಾಯಗೊಂಡು ಕಟೀಲು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಟೀಲು ಕಡೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ರಾಜಶ್ರೀ ಎಂಬ ಹೆಸರಿನ ಬಸ್ಸಿಗೆ ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ.

ಅಪಘಾತದಿಂದ ಬಸ್ ಹಾಗೂ ಟಿಪ್ಪರ್ ಗೆ ಹಾನಿಯಾಗಿದೆ. ಟಿಪ್ಪರ್ ನ ಸ್ಟೇರಿಂಗ್ ರಾಡ್ ತುಂಡಾದದ್ದು ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!