November 22, 2024

ಶಬರಿಮಲೆ ಯಾತ್ರಾಥಿ೯ಗಳಿಗೆ ಕಂಟಕವಾದ ಕನಾ೯ಟಕ ಸರಕಾರದ ಗಡಿ ತಪಾಸಣೆ ಆದೇಶ:
ಕೇರಳ-ತಮಿಳುನಾಡು ಕೆಎಸ್‌ಆರ್‌ಟಿಸಿ ಸೇವೆ ಪುನರಾರಂಭ

0

ತಿರುವನಂತಪುರ: ಕೇರಳದಿಂದ ತಮಿಳುನಾಡಿಗೆ ಕೆಎಸ್‌ಆರ್‌ಟಿಸಿ ಸೇವೆಗಳು ಪುನರಾರಂಭಗೊಂಡಿವೆ. ಇಂದಿನಿಂದ ರಾಜ್ಯದ ಗಡಿಯಲ್ಲಿ ಬಸ್ ಸಂಚಾರ ಪುನರಾರಂಭವಾಗಲಿದೆ. ನಿನ್ನೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಆದರೆ ಕನಾ೯ಟಕ ಸರಕಾರದ ಗಡಿ ತಪಸಣಾ ಆ ದೇಶ ಶಬರಿಮಲೆಗೆ ಬಸ್ ಮೂಲಕ ತೆರಳುವ ಭಕ್ತಾದಿಗಳಿಗೆ ತೊಂದರೆಯನ್ನುಂಟುಮಾಡಿದೆ.

ತಮಿಳುನಾಡಿಗೆ ಮತ್ತು ಕೇರಳ ಸಾರ್ವಜನಿಕ ಸಾರಿಗೆಯನ್ನು ಪುನರಾರಂಭಿಸಲು ತಮಿಳುನಾಡು ಅನುಮತಿ ನೀಡಿದೆ. ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಬಸ್ ಸಂಚಾರವನ್ನು ಪುನರಾರಂಭಿಸಬೇಕು ಎಂದು ಕೇರಳ ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ತಮಿಳುನಾಡಿನ ವಿವಿಧ ಜಿಲ್ಲೆಗಳಿಗೆ KSRTC ಸೇವೆಗಳೊಂದಿಗೆ ಖಾಸಗಿ ಬಸ್ಸುಗಳು ಸಹ ಲಭ್ಯವಿವೆ. ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿನಾಯಿತಿ ನೀಡಲಾಗಿದೆ. ಏತನ್ಮಧ್ಯೆ, ಕೇರಳ ಈ ಹಿಂದೆ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಬಸ್ ಸೇವೆಗಳನ್ನು ಮಂಜೂರು ಮಾಡಿತ್ತು.

ಮೊದಲು ಆಂಧ್ರಪ್ರದೇಶ ಮತ್ತು ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ತಮಿಳುನಾಡಿಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಕೇರಳದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾದ ನಂತರ ಈ ವಿನಾಯಿತಿ ನೀಡಲಾಗಿದೆ

Leave a Reply

Your email address will not be published. Required fields are marked *

error: Content is protected !!