March 26, 2026

ಕೊಡಾಜೆ – ಪಂತಡ್ಕ:  ಮಿಲಾದ್ ಫೆಸ್ಟ್ 2023 ಕಾರ್ಯಕ್ರಮ

0
IMG-20231015-WA0088


ಬಂಟ್ವಾಳ : ಕೊಡಾಜೆ ಬದ್ರಿಯಾ  ಜುಮಾ ಮಸೀದಿ ಅಧೀನದ ಪಂತಡ್ಕ ತರ್ಬಿಯತುಲ್ ಇಸ್ಲಾಂ ಮದ್ರಸ  ವಿದ್ಯಾರ್ಥಿಗಳ ಮಿಲಾದ್ ಫೆಸ್ಟ್ 2023  ಕಾರ್ಯಕ್ರಮ ಭಾನುವಾರ ಮದರಸ ವಠಾರದಲ್ಲಿ ನಡೆಯಿತು.

     ಕೊಡಾಜೆ ಬದ್ರಿಯಾ  ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್ ಅಧ್ಯಕ್ಷತೆ ವಹಿಸಿದ್ದರು, ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಉದ್ಘಾಟಿಸಿದರು.

   ಮಸೀದಿ ಪ್ರಧಾನ ಕಾರ್ಯದರ್ಶಿ ನವಾಝ್ ಭಗವಂತಕೋಡಿ, ಪದಾಧಿಕಾರಿಗಳಾದ ಇಬ್ರಾಹಿಂ ಹಾಜಿ ನೆಡ್ಯಾಲು,  ಸಮದ್ ಪರ್ಲೊಟ್ಟು, ಎಸ್.ಎಂ.ಎಸ್. ಇಬ್ರಾಹಿಂ ಅನಂತಾಡಿ, ಪ್ರಮುಖರಾದ ಹಂಝ ಹಾಜಿ ಪಂತಡ್ಕ ಅತಿಥಿಗಳಾಗಿ ಭಾಗವಹಿಸಿದ್ದರು.

   ಇದೇ ವೇಳೆ ಮದ್ರಸ ವಿದ್ಯಾರ್ಥಿಗಳಿಂದ ವಿವಿಧ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು, ಹಾಗೂ ಬಹುಮಾನ ವಿತರಿಸಲಾಯಿತು.

   ಕೊಡಾಜೆ ಮದರಸ ಮುಖ್ಯ ಶಿಕ್ಷಕ ಪಿ.ಎ.ಝಕರಿಯಾ ಅಸ್ಲಮಿ ಮರ್ದಾಳ, ಶಿಕ್ಷಕರುಗಳಾದ ಅಶ್ರಫ್ ಯಮಾನಿ, ಅಬ್ದುಲ್ ರಶೀದ್ ಅಲ್ ಅಝ್ ಹರಿ, ಇಬ್ರಾಹಿಂ ಬಾತಿಷಾ ಇರ್ಫಾನಿ, ಮಖ್ಬೂಲ್ ಫೈಝಿ, ಹಾಗೂ ಹಾರಿಸ್ ಮುಸ್ಲಿಯಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

     ಪಂತಡ್ಕ ಮದರಸ ಮುಖ್ಯ ಶಿಕ್ಷಕ ಜಾಫರ್ ಅರ್ಶದಿ ಸ್ವಾಗತಿಸಿ,  ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!