ಕಾಸರಗೋಡು: ಸುಲ್ತಾನ್ ಜ್ಯುವೆಲ್ಲರಿಗೆ ಪಂಗನಾಮ:
ಮಂಗಳೂರು ಮೂಲದ ಉದ್ಯೋಗಿ ಚಿನ್ನ ಮತ್ತು ವಜ್ರ ದೋಚಿ ಪರಾರಿ
ಕಾಸರಗೋಡು: ಕಾಸರಗೋಡು ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರ ವಂಚನೆ ನಡೆದಿದೆ. ಅಲ್ಲಿಯ ಉದ್ಯೋಗಿಯು ಚಿನ್ನ ಮತ್ತು ವಜ್ರ ದೋಚಿದ್ದಾನೆ ಎಂದು ಹಿರಿಯ ಉದ್ಯೋಗಿಯೊಬ್ಬರು ಕಾಸರಗೋಡು ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರು-ಬಿ.ಸಿ ರೋಡ್ ನಿವಾಸಿ ಮೊಹಮ್ಮದ್ ಫಾರೂಕ್ ವಂಚನೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ.
ಒಂದೂವರೆ ವರ್ಷದಲ್ಲಿ ನೌಕರನೊಬ್ಬ ಅಂಗಡಿಯಲ್ಲಿದ್ದ ಸುಮಾರು 2.5 ಕೋಟಿ ಮೌಲ್ಯದ ಮಾಲನ್ನು ದೋಚಿದ್ದಾನೆ. ಜ್ಯುವೆಲ್ಲರಿಯ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಅತೀ ಸಾಮರ್ಥ್ಯದಿಂದ ಚಿನ್ನ ಮತ್ತು ವಜ್ರ ಕಳವು ಮಾಡಿದ್ದಾಗಿ ಆರೋಪಿಸಲಾಗಿದೆ. ಚಿನ್ನಾಭರಣ ಮಾಲೀಕರು ಕಳೆದುಹೋದ ಚಿನ್ನವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಚಿನ್ನ ಮತ್ತು ವಜ್ರಗಳನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಉದ್ಯೋಗಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ.