May 13, 2026

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ: ಸಬ್ಸಿಡಿ 100 ರೂ.ಏರಿಕೆ

0
IMG-20231004-WA0003.jpg



ನವದೆಹಲಿ: ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಎಲ್‌ಪಿಜಿ ಸಿಲಿಂಡರ್‌‌ಗೆ ಹೆಚ್ಚುವರಿಯಾಗಿ ಮತ್ತೆ 100 ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಬಡತನ ರೇಖೆಯಲ್ಲಿರುವ ನಿವಾಸಿಗಳಿಗೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳ ಸಬ್ಸಿಡಿ 300 ರೂಪಾಯಿಗೆ ಏರಿಕೆಯಾಗಿದೆ.

ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಉಜ್ವಲ ಯೋಜನೆ ಫಲಾನುಭವಿಗಳು ಇದೀಗ ಎಲ್‌ ಪಿಜಿ ಸಿಲಿಂಡರ್‌ ಗೆ 300 ರೂಪಾಯಿ ಸಬ್ಸಿಡಿ ಪಡೆಯಲಿದ್ದು, ಈ ಮೊದಲು 200 ರೂಪಾಯಿ ಸಬ್ಸಿಡಿ ನೀಡಲಾಗಿತ್ತು. ಇದರೊಂದಿಗೆ ಉಜ್ವಲಾ ಫಲಾನುಭವಿಗಳ ಗ್ಯಾಸ್‌ ಸಿಲಿಂಡರ್‌ ಗೆ ಒಟ್ಟು 500 ರೂಪಾಯಿ ಇಳಿಕೆಯಾದಂತಾಗಿದೆ.

ಉಜ್ವಲಾ ಸಬ್ಸಿಡಿಯಲ್ಲಿ ಪ್ರತಿ ಸಿಲಿಂಡರ್‌ಗೆ 200 ರೂ.ನಿಂದ 300 ರೂ.ಗೆ ಏರಿಸಿ ಗಣನೀಯ ಹೆಚ್ಚಳವನ್ನು ಕೇಂದ್ರ ಸಚಿವ ಸಂಪುಟ ಪ್ರಕಟಿಸಿದೆ.

Leave a Reply

Your email address will not be published. Required fields are marked *

error: Content is protected !!