March 15, 2026

ಉಡುಪಿ: ಅನ್ಯ ಮತೀಯ ಯುವಕ ಯುವತಿಯನ್ನು ತಡೆದು ಗೂಂಡಾಗಿರಿ: 10 ಮಂದಿ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ FIR

0
image_editor_output_image-1621968457-1695362801650.jpg

ಉಡುಪಿ: ಅನ್ಯ ಮತೀಯ ಯುವಕ ಯುವತಿಯನ್ನು ತಡೆದು ಗೂಂಡಾಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.

ಕಳೆದ ತಿಂಗಳು 22 ರಂದು ಆಗುಂಬೆ ಸಮೀಪದ ಸಿರಿ‌ಮನೆ ಫಾಲ್ಸ್ ಗೆ ಹೋಗಿ ವಾಪಸ್ ಬರುವಾಗ ಅನ್ಯಮತೀಯ ಜೋಡಿಯನ್ನು ಸಂಘರಿವಾರದ ಕಾರ್ಯಕರ್ತರು ತಡೆದು ಗೂಂಡಾಗಿರಿ ಮಾಡಿದ್ದರು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಹಿಂದೂ ಕಾರ್ಯಕರ್ತರ ವಿರುದ್ಧ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಯುವಕ, ಯುವತಿ ಪರಿಚಯಸ್ಥರಾದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ವಾಪಸ್ ಕಳುಹಿಸಿದ್ದರು.

ಘಟನೆಯ ವೀಡಿಯೋವನ್ನು ಹಿಂದೂ ಧರ್ಮ 006 ಎನ್ನುವ ಫೇಸ್ ಬುಕ್ ಪೇಜ್ ನಿಂದ ವೀಡಿಯೋ ಅಪ್ಲೋಡ್ ಮಾಡಲಾಗಿದ್ದು, ಇದೀಗ ಇನ್ಸ್ಸ್ಟಾಗ್ರಾಂ, ವಾಟ್ಸಾಪ್ ನಲ್ಲಿ ಯುವಕ, ಯುವತಿಯ ಫೋಟೋ ವೀಡಿಯೋ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಬೆನ್ನಲ್ಲೇ ಯುವತಿಯ ಸಹೋದರ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!