ಬಂಟ್ವಾಳ: ರಸ್ತೆ ಬದಿಯ ಚರಂಡಿಗೆ ಬಿದ್ದ ಲಾರಿ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಇಂದು ಮುಂಜಾನೆ ವೇಳೆ ದಾಸಕೋಡಿ ಎಂಬಲ್ಲಿ ನಡೆದಿದ್ದು, ಚಾಲಕ ಮತ್ತು ಕ್ಲೀನರ್ ಇಬ್ಬರು ಅಲ್ಪಸ್ವಲ್ಪ ಪ್ರಮಾಣದ ಗಾಯಗಳಿಂದ ಪಾರಾಗಿದ್ದಾರೆ.
ಆರಿಪ್ ಮತ್ತು ರಿಯಾಜ್ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬೆಂಗಳೂರು ಕಡೆಯಿಂದ ಮಂಗಳೂರಿಗೆ ಇದ್ದಿಲು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಚರಂಡಿಗೆ ಬಿದ್ದಿದೆ.
ಮುಂಜಾನೆ ಸುಮಾರು 4.30 ರವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಚಾಲಕ ನಿದ್ದೆಯ ಮಂಪರಿನಲ್ಲಿ ಚಾಲನೆ ಮಾಡಿದರ ಪರಿಣಾಮ ಈ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಘಟನೆ ನಡೆದ ಕೂಡಲೇ ಲಾರಿಯೊಳಗೆ ಬಾಕಿಯಾಗಿದ್ದ ಇಬ್ಬರು ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಇಬ್ಬರು ಕೂಡ ಯಾವುದೇ ಅಪಾಯವಿಲ್ಲದೆ ಸಣ್ಣಪುಟ್ಟ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ.