February 4, 2026

ಮಡಿಕೇರಿ: ಹಾಲಿನ ಟ್ಯಾಂಕರ್‌ ಢಿಕ್ಕಿ, ಬೈಕ್‌ ಸವಾರ ಮೃತ್ಯು

0
image_editor_output_image302309348-1695287642716.jpg

ಮಡಿಕೇರಿ: ಹಾಲಿನ ಟ್ಯಾಂಕರ್‌ ಮತ್ತು ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಮಡಿಕೇರಿಯ ಕಾಟಕೇರಿ ಬಳಿ ನಡೆದಿದೆ.

ಮಡಿಕೇರಿ ಮೆಡಿಕಲ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ, ಉಡುಪಿ ಮೂಲದ ವಿಜೇಶ್‌ ಮೃತ ಯುವಕ. ಬುಧವಾರ ಸಂಜೆ ಉಡುಪಿಯಿಂದ ವಿಜೇಶ್‌ ಮತ್ತು ಶಿವಾನಂದ್‌ ಎಂಬವರು ಬೈಕ್‌ನಲ್ಲಿ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದು, ಈ ವೇಳೆ ಕಾಟಕೇರಿ ಬಳಿ ಮಡಿಕೇರಿಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಬಹು ಚಕ್ರದ ಹಾಲಿನ ಟ್ಯಾಂಕರ್‌ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ ಸವಾರ ವಿಜೇಶ್‌ ಮೃತಪಟ್ಟಿದ್ದು, ಹಿಂಬದಿ ಸವಾರ ಶಿವಾನಂದ್‌ ಅವರಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಲಾರಿ ಸಹಿತ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!