ಮನೆಯ ಮಂದಿಯನ್ನು ಕಟ್ಟಿ ಹಾಕಿ ಫಿಲ್ಮಿಸ್ಟೈಲ್ ನಲ್ಲಿ ದರೋಡೆ
ಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದ ವೇಳೆಗೆ ಮನೆಗೆ ನುಗ್ಗುತ್ತಿದ್ದ ಕಳ್ಳರು ಈಗ ಮನೆಯಲ್ಲಿದ್ದವರನ್ನ ಕಟ್ಟಿಹಾಕಿ ದರೋಡೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮನೆಯ ಸದಸ್ಯರನ್ನು ಕಟ್ಟಿಹಾಕಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದರೋಡೆ ಮಾಡಿರುವ ಘಟನೆ ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ನಡೆದಿದೆ. ಉಲ್ಲಾಸ ದೊಡ್ಡಮನಿ ಎಂಬುವವರ ಮನೆಯಲ್ಲಿ ದರೋಡೆ ನಡೆದಿದ್ದು, ವಿದ್ಯಾ ಮಂದಿರ ಬುಕ್ ಡಿಪೋ ಮಾಲೀಕ ಉಲ್ಲಾಸ ದೊಡ್ಡಮನಿಯವರ ಮನೆಯ ಕಿಟಕಿಯ ಕಬ್ಬಿಣದ ಗ್ರೀಲ್ ಕಟ ಮಾಡಿ ಮನೆಹೊಕ್ಕು 6 ಜನರನ್ನ ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.
ಸುಮಾರು ಎಂಟು ಜನ ಡಕಾಯಿತರಿಂದ ಕೃತ್ಯ ನಡೆದಿದ್ದು, ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಯಾದ ಗಣೇಶನನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನಕ್ಕೆ ಮುಂದಾಗಿದ್ದು, ಪೊಲೀಸರು ಈದ್ಗಾ ಮೈದಾನದ ಗಣೇಶನ ವಿಸರ್ಜನೆಯಲ್ಲಿ ಬ್ಯೂಶಿ ಆಗಿರುವುದನ್ನು ಬಂಡವಾಳ ಮಾಡಿಕೊಂಡು ದರೋಡೆ ನಡೆಸಿದ್ದಾರೆ.
ಗಣೇಶನ ವಿಸರ್ಜನೆಗೆ ಐದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಇದರಿಂದಾಗಿ ಗಸ್ತು ತಿರುಗಲು ಪೊಲೀಸರ ಕೊರತೆ ಉಂಟಾಗಿದೆ. ಇದನ್ನೆ ಬಂಡವಾಳಗಿಟ್ಟುಕೊಂಡ ಡಾಕಾಯಿತರು ದರೋಡೆ ಮಾಡಿದ್ದಾರೆ. ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.





