March 22, 2026

ಮಂಗಳೂರು: ಕೊಲೆ, ಬೆದರಿಕೆ, ಹಣ ವಸೂಲಿ ಪ್ರಕರಣ: ರೌಡಿಶೀಟರ್ ತಲ್ಲತ್ ಬಂಧನ

0
image_editor_output_image-923057720-1695203480209.jpg

ಮಂಗಳೂರು: ನಗರದಲ್ಲಿ ಕೊಲೆ, ಕೊಲೆಯತ್ನ, ಬೆದರಿಕೆ, ಹಣ ವಸೂಲಿ ಪ್ರಕರಣಗಳಲ್ಲಿ ರೌಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪಡೀಲ್ ಫೈಸಲ್ ನಗರನಿವಾಸಿ ತಲ್ಲತ್ (39) ಬಂಧಿತ ವ್ಯಕ್ತಿ.

ಇತ್ತೀಚೆಗೆ ತಲ್ಲತ್ ಮುಂಬೈನಿಂದ ಊರಿಗೆ ಬಂದಿದ್ದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೊಟ್ಟಾರದಲ್ಲಿದ್ದಾಗ ಬಂಧಿಸಿದ್ದಾರೆ.

ಬಳಿಕ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಲ್ಲತ್ ವಿರುದ್ಧ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಕೊಣಾಜೆ, ಬರ್ಕೆ, ಮುಂಬೈ ಮುಂತಾದ ಕಡೆಗಳಲ್ಲಿ ಹತ್ಯೆ, ಜೀವ ಬೆದರಿಕೆ, ಹಫ್ತಾ ವಸೂಲಿ, ದರೋಡೆ, ಕೊಲೆಯತ್ನ ಕೊಲೆ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ, ಅಪಹರಣ ಹೀಗೆ ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!