ಕಾರ್ಕಳ: ರಸ್ತೆ ಬದಿಯಿಂದ ಹೋಗುತ್ತಿದ್ದ ಹಸುವಿಗೆ ಕಾರು ಢಿಕ್ಕಿ
ಕಾರ್ಕಳ : ರಸ್ತೆಯ ಬದಿಯಿಂದ ಹೋಗುತ್ತಿದ್ದ ಗಬ್ಬಹಸುವೊಂದಕ್ಕೆ ಮಹೇಂದ್ರ ಎಕ್ಸು ಯು ವಿ ಕಾರೊಂದು ಡಿಕ್ಕಿ ಹೊಡೆದ ಹೋದ ಘಟನೆ ಮಂಗಳವಾರ ಸಂಜೆ 7.00 ಗಂಟೆಗೆ ನಗರದ ನ್ಯಾಯಾಲಯ ರಸ್ತೆಯಲ್ಲಿ ನಡೆದಿದೆ.
ಮಂಗಲಪಾದೆಯ ಪ್ರವೀಣ್ ಎಂಬವರಿಗೆ ಸೇರಿದ ಗಬ್ಬಹಸು ಘಟನೆಯಲ್ಲಿ ತೀವ್ರ ತರದಲ್ಲಿ ಗಾಯಗೊಂಡಿದ್ದು, ಕೊಂಬು ಮುರಿದುಕೊಂಡಿದೆ.
ಮಂಗಲಪಾದೆಯ ಪ್ರವೀಣ್ ಅವರು ತನ್ನ ಮನೆ ಮಂದಿಯ ಜೊತೆ ಕಾರಿನಲ್ಲಿ ನ್ಯಾಯಾಲಯ ರಸ್ತೆಯಾಗಿ ಪ್ರಯಾಣಿಸುತ್ತಿದ್ದಾಗ, ಮನೆಯ ಹಸು ರಸ್ತೆಯಂಚಿನಲ್ಲಿ ಕಾಣಸಿಕ್ಕಿತು.
ಕಾರಿನಲ್ಲಿ ಇದ್ದ ಬಾಲಕನಲ್ಲಿ ಹಸು ಅಲ್ಲಿದೆ. ಕರೆದೊಯ್ಯುವ ಎಂದು ಹೇಳಿದ ಪ್ರವೀಣ್, ಕಾರನ್ನು ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸುತ್ತಿದ್ದಂತೆ ಅದೇ ಸಂದರ್ಭದಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ದಾವಿಸಿ ಬಂದ ಮಹೇಂದ್ರ ಎಕ್ಸ್ ಯು ವಿ ಕಾರು ಗಬ್ಬ ಹಸುವಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಭುವನೇಂದ್ರ ಕಾಲೇಜು ರಸ್ತೆ ಯಾಗಿ ಹಾದು ಹೋಗಿದೆ.
ಪಶುವೈದ್ಯರು ಘಟನಾ ಸ್ಥಳಕ್ಕೆ ಅಗಮಿಸಿ ಗಬ್ಬಹಸುವಿಗೆ ಚಿಕಿತ್ಸೆ ನೀಡಿದ್ದಾರೆ.





